ಶನಿವಾರ, ನವೆಂಬರ್ 23, 2019
17 °C

ಇಸ್ರೇಲ್‌: ಸರ್ಕಾರ ರಚನೆ ಸಾಧ್ಯತೆ ಇನ್ನೂ ಅನಿಶ್ಚಿತ

Published:
Updated:

ಜೆರುಸಲೆಂ: ಇಸ್ರೇಲ್‌ನ ಸಾರ್ವತ್ರಿಕ ಚುನಾವಣೆಯ ಮತಎಣಿಕೆ ಶುಕ್ರವಾರ ಬಹುತೇಕ ಮುಗಿದಿದ್ದು, ಅತಂತ್ರ ಫಲಿತಾಂಶ ಹೊರಬಿದ್ದಿದೆ. ಬೆನ್ನಿ ಗಾಂಟ್ಜ್ ನೇತೃತ್ವದ ಪಕ್ಷ ಅತ್ಯಧಿಕ ಸ್ಥಾನವನ್ನು ಗಳಿಸಿದ್ದರೂ ಸರ್ಕಾರ ರಚಿಸುವಷ್ಟು ಬಹುಮತ ದೊರೆತಿಲ್ಲ.

ಇಸ್ರೇಲ್‌ನ ಚುನಾವಣೆ ಸಮಿತಿ ಪ್ರಕಟಿಸಿರುವ ಫಲಿತಾಂಶದ ಪ್ರಕಾರ, 120 ಸದಸ್ಯ ಬಲದ ಸಂಸತ್ತಿನಲ್ಲಿ ಗಾಂಟ್ಜ್‌ ನೇತೃತ್ವದ ಬ್ಲೂ ಅಂಡ್‌ ವೈಟ್ ಪಕ್ಷ 33 ಸ್ಥಾನ ಗಳಿಸಿದ್ದರೆ, ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಅವರ ಲಿಕುಡ್‌ ಪಕ್ಷ 31 ಸ್ಥಾನವನ್ನು ಗಳಿಸಿದೆ.

14 ಮತಗಟ್ಟೆಗಳಲ್ಲಿ ಮತಎಣಿಕೆ ಇನ್ನು ನಡೆದಿದೆ. ಅಂತಿಮ ಫಲಿತಾಂಶ ಬುಧವಾರ ಪ್ರಕಟವಾಗಲಿದೆ ಎಂದು ಚುನಾವಣಾ ಸಮಿತಿ ತಿಳಿಸಿದೆ. ಇಸ್ರೇಲ್‌ ಮಾಧ್ಯಮಗಳು ಈಗಾಗಲೇ ಶೇ 99.8ರಷ್ಟು ಮತಗಳ ಎಣಿಕೆ ಪ್ರಕ್ರಿಯೆ ಪೂರ್ಣಗೊಂಡಿದೆ ಎಂದು ಪ್ರಕಟಿಸಿವೆ.

13 ಸ್ಥಾನ ಗೆದ್ದಿರುವ ಅರಬ್‌ ಜಾಯಿಂಟ್‌ ಲೀಸ್ಟ್‌ ಮೈತ್ರಿಕೂಟ 3ನೇ ಅತಿದೊಡ್ಡ ಪಕ್ಷವಾಗಿದ್ದರೆ, ಶಾಸ್‌ ಪಕ್ಷ 9, ಯುನೈಟೆಡ್‌ ತೊರ‍್ಹಾ ಜುದೈಸಂ ಮತ್ತು ರಾಷ್ಟ್ರೀಯ ಯೆಸ್ರೇಲ್‌ ಬಿಟಿನು ಪಕ್ಷ ತಲಾ ಎಂಟು ಸ್ಥಾನಗಳನ್ನು ಗೆದ್ದಿವೆ.

ಪ್ರತಿಕ್ರಿಯಿಸಿ (+)