ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ತಲ್ಲಣ: ಇಟಲಿಯಲ್ಲಿ ಕಡಿಮೆಯಾಗುತ್ತಿದೆ ಐಸಿಯುಗೆ ದಾಖಲಾಗುವವರ ಸಂಖ್ಯೆ

Last Updated 5 ಏಪ್ರಿಲ್ 2020, 3:09 IST
ಅಕ್ಷರ ಗಾತ್ರ

ರೋಮ್: ಇಟಲಿಯಲ್ಲಿ ಕೊರೊನಾ ವೈರಸ್ ಸೋಂಕಿನಿಂದ (ಕೋವಿಡ್–19) ತೀವ್ರ ನಿಗಾ ಘಟಕಕ್ಕೆ (ಐಸಿಯು) ದಾಖಲಾಗುವವರ ಸಂಖ್ಯೆಯಲ್ಲಿ ಮೊದಲ ಬಾರಿ ಇಳಿಕೆಯಾಗಿದೆ ಎಂದು ಅಲ್ಲಿನ ನಾಗರಿಕ ಸಂರಕ್ಷಣಾ ಪ್ರಾಧಿಕಾರ ತಿಳಿಸಿದೆ.

ಕೊರೊನಾದಿಂದ ಇಟಲಿಯಲ್ಲಿ ಶನಿವಾರ 681 ಜನ ಮೃತಪಟ್ಟಿದ್ದು, ಸಾವಿನ ಸಂಖ್ಯೆ 15,362 ತಲುಪಿದೆ. ಆದಾಗ್ಯೂ, ಇತ್ತೀಚಿನ ದಿನಗಳಿಗೆ ಹೋಲಿಸಿದರೆ ದಿನವೊಂದರಲ್ಲಿ ದಾಖಲಾದ ಕಡಿಮೆ ಸಾವಿನ ಪ್ರಕರಣವಿದು ಎನ್ನಲಾಗಿದೆ.

ಉತ್ತರ ಇಟಲಿಯಲ್ಲಿ ಫೆಬ್ರುವರಿ 21ರಂದು ಕೊರೊನಾ ಸೋಂಕು ಉಲ್ಬಣಿಸಿದ ಬಳಿಕ ಐಸಿಯುಗೆ ದಾಖಲಾದವರ ಸಂಖ್ಯೆ 4,068ರ ವರೆಗೂ ತಲುಪಿತ್ತು. ಸದ್ಯ 3,994ಕ್ಕೆ ಇಳಿಕೆಯಾಗಿದೆ.

ಇದು ತುಂಬಾ ಮಹತ್ವದ ಸುದ್ದಿ ಎಂದು ನಾಗರಿಕ ಸಂರಕ್ಷಣಾ ಪ್ರಾಧಿಕಾರದ ಮುಖ್ಯಸ್ಥ ಏಂಜಲೊ ಬೊರೆಲ್ಲಿ ಹೇಳಿದ್ದಾರೆ. ಕಳೆದ 24 ಗಂಟೆಗಳಲ್ಲಿ ಐಸಿಯುಗೆ ದಾಖಲಾಗುವವರ ಸಂಖ್ಯೆ ಕಡಿಮೆಯಾಗಿರುವುದು ನಿಟ್ಟುಸಿರು ಬಿಡುವಂತೆ ಮಾಡಿದೆ ಎಂದು ಅವರು ಹೇಳಿದ್ದಾರೆ.

ಇಟಲಿಯಲ್ಲಿ ಶುಕ್ರವಾರ 1,19,827 ರಷ್ಟಿದ್ದ ಕೊರೊನಾ ಪ್ರಕರಣಗಳು ಈಗ 1,24,632 ತಲುಪಿವೆ. ಸುಮಾರು 20,996 ಜನ ಗುಣಮುಖರಾಗಿದ್ದಾರೆ ಎಂದು ಘೋಷಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT