ಹ್ಯೂಸ್ಟನ್‌ನಲ್ಲಿ ಜೈಪುರ ಸಾಹಿತ್ಯ ಉತ್ಸವ

7

ಹ್ಯೂಸ್ಟನ್‌ನಲ್ಲಿ ಜೈಪುರ ಸಾಹಿತ್ಯ ಉತ್ಸವ

Published:
Updated:

ಹ್ಯೂಸ್ಟನ್‌: ಜೈಪುರ ಸಾಹಿತ್ಯ ಉತ್ಸವ (ಜೆಎಲ್‌ಎಫ್‌) ಇದೇ ಮೊದಲ ಬಾರಿಗೆ ಅಮೆರಿಕದ ಹ್ಯೂಸ್ಟನ್‌ನಲ್ಲಿ ನಡೆಯಲಿದೆ. ಅಮೆರಿಕದಲ್ಲಿ ನಡೆಯುತ್ತಿರುವ ಅತಿ ದೊಡ್ಡ ಸಾಹಿತ್ಯ ಉತ್ಸವ ಇದಾಗಲಿದೆ ಎಂದು ಸಂಘಟಕರು ಹೇಳಿದ್ದಾರೆ.

ಸೆ.14 ಮತ್ತು 15ರಂದು ಸಮ್ಮೇಳನ ನಡೆಯಲಿದ್ದು, ಸಂಸದ ಶಶಿ ತರೂರ್‌, ಅಮೆರಿಕದಲ್ಲಿನ ಭಾರತದ ರಾಯಭಾರಿ ನವತೇಜ್‌ ಸರ್ನಾ ಭಾಗವಹಿಸಲಿದ್ದಾರೆ.

 ಹ್ಯೂಸ್ಟನ್‌ ಅಲ್ಲದೆ, ಸೆ.19 ಮತ್ತು 20ರಂದು ನ್ಯೂಯಾರ್ಕ್‌ನಲ್ಲಿ, 21ರಿಂದ 23ರವರೆಗೆ ಕೊಲರಾಡೊದ ಬೌಲ್ಡರ್‌ನಲ್ಲಿಯೂ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.

‘ಏಷ್ಯಾ ಮತ್ತು ಪಾಶ್ಚಿಮಾತ್ಯ ಸಂಸ್ಕೃತಿಯ ತಿಳಿವಳಿಕೆ ಮತ್ತು ಜನರ ನಡುವೆ ಸಹಕಾರ ವೃದ್ಧಿಸುವ ಉದ್ದೇಶದಿಂದ ಈ ಸಮ್ಮೇಳನ ಆಯೋಜಿಸಲಾಗಿದೆ’ ಎಂದು ದಿ ಏಷ್ಯಾ ಸೊಸೈಟಿ ಹೇಳಿದೆ. ‘ದಕ್ಷಿಣ ಏಷ್ಯಾದ ಸಮೃದ್ಧ ಸಾಹಿತ್ಯ ಮತ್ತು ಪರಂಪರೆ ಉತ್ಸವದಲ್ಲಿ ಅನಾವರಣಗೊಳ್ಳಲಿದೆ. ವಿಶ್ವದ ಖ್ಯಾತ ಕವಿಗಳಲ್ಲದೆ, ಸ್ಥಳೀಯ ಸಾಹಿತಿಗಳು ಸಮ್ಮೇಳನದಲ್ಲಿ ಪಾಲ್ಗೊಳ್ಳಲಿದ್ದಾರೆ’ ಎಂದು ಸಂಘಟಕ ಸುನಿಲ್‌ ವರ್ಮಾ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !