ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ಸೋಂಕು: ಲಾಕ್‌‌ಡೌನ್ ಜಾರಿಗೆ ಜಪಾನ್ ಸಿದ್ಧತೆ

Last Updated 6 ಏಪ್ರಿಲ್ 2020, 9:43 IST
ಅಕ್ಷರ ಗಾತ್ರ

ಟೋಕಿಯೋ (ಜಪಾನ್): ಕೊರೊನಾ ಸೋಂಕು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಜಪಾನ್‌‌ನಲ್ಲಿಯೂ ಲಾಕ್‌ಡೌನ್ ಜಾರಿ ಮಾಡಲು ಸರ್ಕಾರ ಎಲ್ಲಾ ಸಿದ್ಧತೆ ನಡೆಸಿದೆ.

ಪ್ರಧಾನಿ ಶಿಂಜೊ ಅಬೆ ಅವರು ಸೋಮವಾರ ತಡರಾತ್ರಿ ಸೋಂಕು ನಿಯಂತ್ರಣಕುರಿತು ತಜ್ಞರ ಸಮಿತಿಯೊಂದಿಗೆ ಸಭೆ ನಡೆಸುವ ನಿರೀಕ್ಷೆಯಿದೆ.ಇದಾದ ನಂತರ ಮಂಗಳವಾರ ತುರ್ತು ಪರಿಸ್ಥಿತಿ ಪ್ರಕಟಿಸುವ ಸಾಧ್ಯತೆ ಇದೆ ಎಂಬ ವರದಿಗಳುಉನ್ನತ ವಲಯದಿಂದ ಕೇಳಿಬಂದಿವೆ.

ಕೊರೊನಾ ಸೋಂಕಿನಿಂದಯುರೋಪ್, ಅಮೆರಿಕಾದಲ್ಲಿ ಉಂಟಾದ ಸಾವು ನೋವಿಗಿಂತಜಪಾನ್‌‌ನಲ್ಲಿನಿಧಾನವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲು ಜಪಾನ್ ಸರ್ಕಾರ ಮುಂದಾಗಿದೆ.ಭಾನುವಾರ ಟೋಕಿಯೊದಲ್ಲಿ 148 ಹೊಸ ಪ್ರಕರಣಗಳು ದಾಖಲಾಗಿವೆ. ಇದರಿಂದಾಗಿ ಸರ್ಕಾರಕ್ಕೆ ಸೋಂಕು ಹರಡುವುದನ್ನು ತಪ್ಪಿಸಲು ಪರಿಣಾಮಕಾರಿ ಮಾರ್ಗ ಹುಡುಕುವುದು ಅನಿವಾರ್ಯವಾಗಿದೆ.

ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿರುವ ಟೋಕಿಯೊದ ಗವರ್ನರ್ ಯುರಿಕೊ ಕಾಯಿಕೆ, ಲಾಕ್ ಡೌನ್ ಬಗ್ಗೆ ಸರ್ಕಾರದಿಂದ ಔಪಚಾರಿಕವಾಗಿ ಯಾವುದೇ ಮಾಹಿತಿ ಬಂದಿಲ್ಲ.ಈಗಾಗಲೇ ನಗರದ ಎಲ್ಲಾ ನಿವಾಸಿಗಳಿಗೆ ಅನಗತ್ಯ ವಿಹಾರಗಳನ್ನು ಕೈಗೊಳ್ಳದಂತೆ ಮನವಿ ಮಾಡಲಾಗಿದೆ. ಅಲ್ಲದೆ, ಅಗತ್ಯ ಕಚೇರಿ ಕೆಲಸಗಳನ್ನು ಮನೆಯಿಂದಲೇ ಮಾಡುವಂತೆ ತಿಳಿಸಲಾಗಿದೆ ಎಂದಿದ್ದಾರೆ.

ಒಂದು ವೇಳೆ ಲಾಕ್ ಡೌನ್ ಜಪಾನ್‌ನಲ್ಲಿ ಜಾರಿಗೆ ಬಂದರೆ ಅದು ಸೋಂಕು ವೇಗವಾಗಿ ಹೆಚ್ಚುತ್ತಿರುವ ದೇಶದ ಕೆಲವು ಭಾಗಗಳನ್ನು ಮಾತ್ರ ಜಾರಿಗೆ ಬರುತ್ತದೆ. ಅಲ್ಲದೆ, ವಿಶ್ವದ ಬೇರೆ ದೇಶಗಳಲ್ಲಿ ಜಾರಿಯಲ್ಲಿರುವಂತೆ ಲಾಕ್ ಡೌನ್‌‌ನ ಕಟ್ಟುನಿಟ್ಟಿನ ನಿಯಮಗಳು ಜಪಾನ್ನಲ್ಲಿ ಜಾರಿಯಲ್ಲಿರುವುದಿಲ್ಲ ಎನ್ನಲಾಗಿದೆ.

ಜಪಾನ್ ಕಾನೂನಿನಲ್ಲಿ ಅವಕಾಶವಿಲ್ಲ

ಜಪಾನಿನ ಸೋಂಕು ಪೀಡಿತ ಪ್ರದೇಶಗಳ ಗವರ್ನರ್‌‌‌ಗಳಿಗೆ ಆದೇಶಿಸಲು ಕಾನೂನಿನಲ್ಲಿ ಅವಕಾಶವಿಲ್ಲ. ಆದರೆ, ಮನವಿ ಮಾಡಿಕೊಳ್ಳಲು ಅವಕಾಶವಿದೆ.ಜನಸಂದಣಿ ಪ್ರದೇಶಗಳನ್ನು ಬಂದ್ ಮಾಡಿ ಮನೆಯಲ್ಲಿಯೇ ಇರಲು ಮನವಿ ಮಾಡಿಕೊಳ್ಳಬಹುದು. ಇತರೆ ದೇಶಗಳಲ್ಲಿ ಇರುವಂತೆಲಾಕ್ ಡೌನ್ ಉಲ್ಲಂಘಿಸುವವರ ವಿರುದ್ಧ ಪ್ರಕರಣ ದಾಖಲು ಮಾಡಿಕೊಳ್ಳಲು ಜಪಾನ್ ಕಾನೂನಿನಲ್ಲಿ ಅವಕಾಶವಿಲ್ಲ.
ಜಪಾನ್ ನಲ್ಲಿ ಸರ್ಕಾರ ಬಲವಂತವಾಗಿ ಮನೆಯಲ್ಲಿಯೇ ಇರುವಂತೆ ಮಾಡಲು ಅವಕಾಶವಿಲ್ಲ ಎಂದು ಜಪಾನಿನ ರಾಜಕೀಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಟೋಕಿಯೋದಲ್ಲಿ ರೈಲು ಸೇವೆಯನ್ನು ಶೇ.50 ರಷ್ಟು ಮಾತ್ರ ಕಡಿಮೆ ಮಾಡುವ ನಿರೀಕ್ಷೆ ಇದೆ. ಅಲ್ಲದೆ, ಸೂಪರ್ ಮಾರ್ಕೆಟ್, ಬ್ಯಾಂಕುಗಳು, ಆಸ್ಪತ್ರೆಗಳಿಗೆ ಅನುಮತಿ ನೀಡುವ ಸಾಧ್ಯತೆ ಇದೆ.ಜಪಾನ್ ಕಾನೂನು ವ್ಯವಸ್ಥೆಯಲ್ಲಿ ನಾಗರಿಕರ ಓಡಾಟವನ್ನು ನಿರ್ಬಂಧಿಸಲು ಸರ್ಕಾರಕ್ಕೆ ಯಾವುದೇ ಅವಕಾಶವಿಲ್ಲ.

ಜನವರಿ ಮಧ್ಯಭಾಗದಲ್ಲಿಜಪಾನಿನಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿತು. ಪ್ರಧಾನಿ ಅಬೆ ಫೆಬ್ರವರಿಯಲ್ಲಿ ರಾಷ್ಟ್ರವ್ಯಾಪಿ ಶಾಲೆಗಳನ್ನು ಮುಚ್ಚುವಂತೆ ಕರೆ ನೀಡಿದ್ದಾರೆ.ಈಗಲೂಜಪಾನ್ ರಸ್ತೆಗಳಲ್ಲಿ ಜನರ ಓಡಾಟ ವಿರಳವಾಗಿದೆ. ಎಲ್ಲರೂ ಸ್ವಯಂ ಪ್ರೇರಿತರಾಗಿ ಮನೆಯಲ್ಲಿಯೇ ಇದ್ದು ರಸ್ತೆಗಳೆಲ್ಲಾ ನಿಶ್ಯಬ್ಧವಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT