ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಪಾನ್‌ನ ಚಕ್ರವರ್ತಿ ಅಕಿಹಿಟೊ ಪದತ್ಯಾಗ ಪುತ್ರ ನರುಹಿಟೊಗೆ ಇಂದು ಪಟ್ಟಾಭಿಷೇಕ

Last Updated 30 ಏಪ್ರಿಲ್ 2019, 20:25 IST
ಅಕ್ಷರ ಗಾತ್ರ

ಟೋಕಿಯೊ: 200 ವರ್ಷಗಳ ಇತಿಹಾಸ ಹೊಂದಿರುವ ಜಪಾನ್‌ನ ರಾಜಮನೆತನದ ಚಕ್ರವರ್ತಿ ಅಕಿಹಿಟೊ ಮಂಗಳವಾರ ಪದತ್ಯಾಗ ಮಾಡಿದರು.

ಅಕಿಹಿಟೊ ಪುತ್ರ ನರುಹಿಟೊ ಅವರು ಪ್ರತಿಷ್ಠಿತ ರಾಜಮನೆತನದ ಕ್ರಿಸಂಥೆಮಮ್‌ ಸಿಂಹಾಸನ ಏರಲು ಸಜ್ಜಾಗಿದ್ದಾರೆ.

ಟೊಕಿಯೊದಲ್ಲಿರುವ ಅರಮನೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ 85 ವರ್ಷದ ಅಕಿಹಿಟೊ ಅವರು ರಾಜಾಧಿಕಾರದ ದ್ಯೋತಕ ಎನಿಸಿದ ಖಡ್ಗ ಹಾಗೂ ಆಭರಣಗಳೊಂದಿಗೆ ಪದತ್ಯಾಗ ವಿಧಿ–ವಿಧಾನಗಳನ್ನು ನೆರವೇರಿಸಿದರು.

ಕಾರ್ಯಕ್ರಮ ಉದ್ಧೇಶಿಸಿ ಮಾತನಾಡಿದ ಅವರು, ‘ಜಪಾನ್‌ ಜನತೆಗೆ ನನ್ನ ಹೃದಯ ತುಂಬಿದ ಕೃತಜ್ಞತೆಗಳು. ಜಪಾನ್‌ ಹಾಗೂ ಜಗತ್ತಿನಲ್ಲಿ ಶಾಂತಿ–ಸಮೃದ್ಧಿ ನೆಲೆಸಲಿ ಎಂಬುದಾಗಿ ಪ್ರಾರ್ಥಿಸುತ್ತೇನೆ’ ಎಂದರು.

59 ವರ್ಷದ ನರುಹಿಟೊ ಅವರು ಬುಧವಾರ (ಮೇ 1) ನಡೆಯುವ ಕಾರ್ಯಕ್ರಮದಲ್ಲಿ ಜಪಾನ್‌ನ 126ನೇ ಚಕ್ರವರ್ತಿಯಾಗಿ ಪದಗ್ರಹಣ ಮಾಡುವರು.

ಪ್ರಧಾನಿ ಶಿಂಜೊ ಅಬೆ, ರಾಜಮನೆತನದ ಸದಸ್ಯರು ಸೇರಿದಂತೆ 300 ಜನರು ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT