ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೇಂದಂಡ ತಂಡಕ್ಕೆ ಕುಲ್ಲೇಟಿರ ಕಪ್‌

Last Updated 20 ಮೇ 2018, 19:30 IST
ಅಕ್ಷರ ಗಾತ್ರ

ನಾಪೋಕ್ಲು: ಕೊಡವ ಕುಟುಂಬಗಳ ನಡುವಿನ 22ನೇ ವರ್ಷದ ಕುಲ್ಲೇಟಿರ ಕಪ್ ಹಾಕಿ ಉತ್ಸವದಲ್ಲಿ ಚೇಂದಂಡ ಚಾಂಪಿಯನ್‌ ಆದರು. ಕಳೆದ ವರ್ಷ ಇಲ್ಲಿನ ಜನರಲ್‌ ಕೆ.ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ಬಿದ್ದಾಟಂಡ ಕಪ್ ಹಾಕಿ ಟೂರ್ನಿಯಲ್ಲೂ ಪ್ರಶಸ್ತಿ ಗೆದ್ದಿದ್ದ ಚೇಂದಂಡ ತಂಡವು ಎರಡನೇ ಬಾರಿಗೆ ಪ್ರಶಸ್ತಿ ಗೆದ್ದು ಸಂಭ್ರಮಿಸಿತು.

ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಚೇಂದಂಡ ತಂಡದವರು 2–0 ಗೋಲುಗಳಿಂದ ಅಂಜಪರವಂಡ ತಂಡವನ್ನು ಸೋಲಿಸಿ ಮತ್ತೆ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು. ಮಧ್ಯಾಹ್ನ 12.10ಕ್ಕೆ ಪಂದ್ಯ ಆರಂಭಗೊಂಡಿತು.

ಆರಂಭದಿಂದಲೇ ಕುತೂಹಲ ಕೆರಳಿಸಿದ್ದ ಪಂದ್ಯದಲ್ಲಿ ಉಭಯ ತಂಡಗಳು ಬಿರುಸಿನ ಆಟದಲ್ಲಿ ತೊಡಗಿದವು. ಚೇಂದಂಡ ತಂಡದ ಆಟಗಾರ ಚೇಂದಂಡ ಬೋಪಣ್ಣ ಆರಂಭದಲ್ಲೇ ಒಂದು ಗೋಲು ದಾಖಲಿಸುವುದರ ಮೂಲಕ ಮುನ್ನಡೆ ಸಾಧಿಸಿದರು.

ಪಂದ್ಯದ ಮೊದಲ ಅರ್ಧ ಅವಧಿಯಲ್ಲಿ ಅಂಜಪರವಂಡ ತಂಡದ ಆಟಗಾರರು ಯಾವುದೇ ಗೋಲು ದಾಖಲಿಸಲಿಲ್ಲ. ಎರಡನೇ ಅವಧಿಯಲ್ಲಿ ಚೇಂದಂಡ ಆಟಗಾರ ಒಲಿಂಪಿಯನ್ ನಿತಿನಬ್‌ ತಿಮ್ಮಯ್ಯ ಗೋಲು ಗಳಿಸಿ ಮಿಂಚಿದರು. ಚೇಂದಂಡ ತಂಡವು 2–0 ಅಂತರದಲ್ಲಿ ಮುನ್ನಡೆ ಸಾಧಿಸಿತು.

ಪಂದ್ಯದ ಕೊನೆ ಹಂತದಲ್ಲಿ ಅಂಜಪರವಂಡ ತಂಡಕ್ಕೆ ಎರಡು ಪೆನಾಲ್ಟಿ ಕಾರ್ನರ್‌ ಅವಕಾಶ ಲಭಿಸಿದರೂ ಚೇಂದಂಡ ತಂಡದ ಆಟಗಾರರ ಬಿಗಿ ಹಿಡಿತದಿಂದ ಗೋಲು ಗಳಿಸಲು ಸಾಧ್ಯವಾಗಲಿಲ್ಲ.

ಅಂಜಪರವಂಡ ತಂಡದ ಪ್ರಯತ್ನ ಹಾಗೂ ಪ್ರತಿರೋಧ ಪ್ರಯೋಜ ನಕಾರಿಯಾಗದೇ ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಕುಲ್ಲೇಟಿರ ಕಪ್ ಹಾಕಿ ಉತ್ಸವದಲ್ಲಿ 334 ತಂಡಗಳು ಪಾಲ್ಗೊಂಡಿದ್ದವು. ಅದರಲ್ಲಿ ಚೇಂದಂಡ ತಂಡವು 22ನೇ ಕೊಡವ ಹಾಕಿ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತು.

2008ರ ಪೊನ್ನಂಪೇಟೆಯಲ್ಲಿ ನಡೆದಿದ್ದ ಅಳಮೇಂಗಡ ಕಪ್‌ ಹಾಗೂ 2013ರ ಬಾಳುಗೋಡುವಿನಲ್ಲಿ ನಡೆದ ಮಾದಂಡ ಕಪ್‌ ಮುಡಿಗೇರಿಸಿಕೊಂಡಿದ್ದ ಅಂಜಪರವಂಡ ತಂಡಕ್ಕೆ 2018ರಲ್ಲಿ ಕುಲ್ಲೇಟಿರ ಕಪ್‌ ಗೆಲ್ಲುವ ಅವಕಾಶ ಲಭಿಸಲಿಲ್ಲ. ಅಂಜಪರವಂಡ ತಂಡದ ಪರ ಆಟಗಾರ್ತಿ ಅಂಜಪರವಂಡ ವಿಷ್ಮಾ ಆಟವಾಡಿ ಪ್ರೇಕ್ಷಕರ ಗಮನ ಸೆಳೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT