ಸೋಮವಾರ, ನವೆಂಬರ್ 18, 2019
29 °C

ಖಿನ್ನತೆ: ಪಾಪ್ ತಾರೆ ಸುಲ್ಲಿ ಆತ್ಮಹತ್ಯೆ?

Published:
Updated:

ಲಾಸ್ ಏಂಜಲೀಸ್: ದಕ್ಷಿಣ ಕೊರಿಯಾದ ಸಿಯೋಲ್‌ನಲ್ಲಿ ಸ್ವಂತ ಮನೆಯಲ್ಲಿ ಕೊರಿಯನ್ ಪಾಪ್ ತಾರೆ ಮತ್ತು ನಟಿ ಸುಲ್ಲಿ ಅವರ ಮೃತದೇಹ ಪತ್ತೆಯಾಗಿದೆ.

ಸುಲ್ಲಿ ಅವರ ನಿಜ ನಾಮಧೇಯ ಚೊಯಿ ಜಿನ್–ರಿ. ಸುಲ್ಲಿ ಹೆಸರಿನಿಂದಲೇ ಜನಪ್ರಿಯತೆ ಗಳಿಸಿದ್ದ ಅವರು, ಖಿನ್ನತೆಯಿಂದ ಬಳಲುತ್ತಿದ್ದರು. ಸುಲ್ಲಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಸ್ಥಳದಲ್ಲಿ ಯಾವುದೇ ಪತ್ರ ಪತ್ತೆಯಾಗಿಲ್ಲ. 

ಪ್ರತಿಕ್ರಿಯಿಸಿ (+)