ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾತ್ರಿಗಳ ಸ್ವಾಗತಕ್ಕೆ ಕರ್ತಾರ್‌ಪುರ ಸಜ್ಜು

Last Updated 3 ನವೆಂಬರ್ 2019, 20:31 IST
ಅಕ್ಷರ ಗಾತ್ರ

ಇಸ್ಲಾಮಾಬಾದ್‌: ಗುರುನಾನಕ್‌ ಅವರ 550ನೇ ಜನ್ಮ ದಿನಾಚರಣೆಗೆ ಸಿಖ್‌ ಯಾತ್ರಾರ್ಥಿಗಳನ್ನು ಸ್ವಾಗತಿಸಲು ಕರ್ತಾರ್‌ಪುರ ಸಜ್ಜಾಗಿದೆ.

ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ ಭಾನುವಾರ ಕರ್ತಾರ್‌ಪುರ ಕಾರಿಡಾರ್‌ ಕಾಂಪ್ಲೆಕ್ಸ್‌ ಮತ್ತು ಗುರುದ್ವಾರ ದರ್ಬಾರ್‌ ಸಾಹೀಬ್‌ ಅವರ ಚಿತ್ರಗಳನ್ನು ಟ್ವೀಟ್‌ ಮೂಲಕ ಹಂಚಿಕೊಂಡಿದ್ದಾರೆ.

‘ಸಿಖ್‌ ಯಾತ್ರಾರ್ಥಿಗಳನ್ನು ಸ್ವಾಗತಿಸಲು ಪ‍ವಿತ್ರ ಧಾರ್ಮಿಕ ಸ್ಥಳ ಕರ್ತಾರಪುರ ಸಜ್ಜಾಗಿದೆ. ಗುರುನಾನಕ್‌ ಅವರ 550ನೇ ಜನ್ಮ ದಿನಾಚರಣೆಗೆ ಕರ್ತಾರ್‌ಪುರವನ್ನು ನಿಗದಿತ ಸಮಯದ ಒಳಗೆ ಸಿದ್ಧಗೊಳಿಸಿದ್ದಕ್ಕೆ ಸರ್ಕಾರವನ್ನು ಸಹ ಅಭಿನಂದಿಸುತ್ತೇನೆ’ ಎಂದು ಇಮ್ರಾನ್‌ ಟ್ವೀಟ್‌ ಮಾಡಿದ್ದಾರೆ.

ಪಾಕಿಸ್ತಾನದಲ್ಲಿರುವ ಹಲವು ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುವಂತೆ ಲಕ್ಷಾಂತರ ಮಂದಿ ಸಿಖ್‌ ಸಮುದಾಯದವರನ್ನು ಆಹ್ವಾನಿಸುವ ಮೂಲಕ ಧಾರ್ಮಿಕ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಇಮ್ರಾನ್‌ ಖಾನ್‌ ಪ್ರಯತ್ನಿಸುತ್ತಿದ್ದಾರೆ ಎಂದು ವಿಶ್ಲೇಷಿಸಲಾಗಿದೆ.

ಗುರುನಾನಕ್‌ ಅವರ ಜನ್ಮ ದಿನಾಚರಣೆಯಲ್ಲಿ ಪಾಲ್ಗೊಳ್ಳಲು ಆಗಮಿಸುವ ಸಿಖ್‌ ಯಾತ್ರಾರ್ಥಿಗಳು ಪಾಸ್‌ಪೋರ್ಟ್‌ ಹೊಂದುವ ಅಗತ್ಯವಿಲ್ಲ ಎಂದು ಪಾಕಿಸ್ತಾನ ಹೇಳಿದೆ.

ನವೆಂಬರ್‌ 9ರಂದು ಕರ್ತಾರ್‌ಪುರ ಕಾರಿಡಾರ್‌ ಉದ್ಘಾಟನೆಯಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT