ಭಾನುವಾರ, ಆಗಸ್ಟ್ 25, 2019
24 °C

ಕಾಶ್ಮೀರ ವಿವಾದ: ಭಾರತೀಯರ ಕ್ಷಮೆಯಾಚಿಸಿದ ಅಮೆರಿಕ ಸಂಸದ

Published:
Updated:
Prajavani

ವಾಷಿಂಗ್ಟನ್: ಜಮ್ಮು –ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದುಮಾಡಿದ ಭಾರತದ ಕ್ರಮ ಕುರಿತಂತೆ ವಿದೇಶಾಂಗ ಕಾರ್ಯದರ್ಶಿ ಮೈಕ್‌ ಪಾಂಪಿಯೊ ಅವರಿಗೆ ಪತ್ರ ಬರೆದಿದ್ದ ಸಂಸದ ಟಾಮ್‌ ಸುಯೋಜಿ, ಇಲ್ಲಿನ ಭಾರತೀಯ ಅಮೆರಿಕನ್ನರ ಕ್ಷಮೆ ಯಾಚಿದ್ದಾರೆ.

‘ಈ ರೀತಿ ಪತ್ರ ಬರೆಯುವ ಮುನ್ನ ನಾನು ಭಾರತೀಯ ಅಮೆರಿಕನ್ನರೊಂದಿಗೆ ಸಮಾಲೋಚನೆ ನಡೆಸಲಿಲ್ಲ. ಇದಕ್ಕಾಗಿ ಕ್ಷಮೆ ಯಾಚಿಸುತ್ತೇನೆ’ ಎಂದು ಹೇಳಿದ್ದಾರೆ. 

ಆಗಸ್ಟ್‌ 9ರಂದು ಪಾಂಪಿಯೊ ಅವರಿಗೆ ಪತ್ರ ಬರೆದಿದ್ದ ಟಾಮ್‌, ‘ಭಾರತದ ಈ ನಿರ್ಧಾರದಿಂದ ಕಾಶ್ಮೀರದಲ್ಲಿ ಅಸಮಾಧಾನ ಭುಗಿಲೇಳಲಿದೆ’ ಎಂದು ಆತಂಕ ವ್ಯಕ್ತಪಡಿಸಿದ್ದರು. 

ಈ ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸಿರುವ ‘ಅಮೆರಿಕನ್ ಇಂಡಿಯಾ ಪಬ್ಲಿಕ್‌ ಅಫೇರ್ಸ್‌ ಕಮಿಟಿ’ಯ ಅಧ್ಯಕ್ಞ ಜಗದೀಶ್ ಸೆವ್ಹಾನಿ, ‘ಪತ್ರ ಬರೆಯುವುದಾದರೆ, ತನ್ನ ನೆಲದಲ್ಲಿರುವ ಉಗ್ರ ಸಂಘಟನೆಗಳ ವಿರುದ್ಧ ನಿರ್ಣಾಯಕ ಮತ್ತು ಮಾರ್ಪಡಿಸಲಾಗದಂತಹ ಕ್ರಮ ಕೈಗೊಳ್ಳುವಂತೆ ‍ಪಾಕಿಸ್ತಾನಕ್ಕೆ ತಾಕೀತು ಮಾಡಿ ಪತ್ರ ಬರೆಯಲಿ’ ಎಂದು ಅಭಿಪ್ರಾಯಪಟ್ಟಿದ್ದಾರೆ. 

Post Comments (+)