ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪತ್ರದ ಮೂಲಕ ಬಿಲ್ಡರ್‌ಗಳಿಗೆ ಧನ್ಯವಾದ ತಿಳಿಸಿದ ಕಿಮ್‌ ಜಾಂಗ್‌ ಉನ್‌

Last Updated 27 ಏಪ್ರಿಲ್ 2020, 7:45 IST
ಅಕ್ಷರ ಗಾತ್ರ

ಸೋಲ್‌: ಉತ್ತರ ಕೊರಿಯಾದ ಸರ್ವಾಧಿಕಾರಿ ನಾಯಕಕಿಮ್‌ ಜಾಂಗ್ ಉನ್‌ ಅವರಆರೋಗ್ಯ ಸ್ಥಿತಿಯ ಬಗ್ಗೆ ಜಗತ್ತಿನಾದ್ಯಂತ ಉಹಾಪೋಹಾಗಳು ಎದ್ದಿವೆ. ಕಿಮ್‌ ಅವರು ಜೀವಂತವಾಗಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹಲವಾರು ವದಂತಿಗಳು ಹರಿದಾಡುತ್ತಿವೆ.

ಈ ಎಲ್ಲ ಸುದ್ದಿಗಳ ನಡುವೆ ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಕಟ್ಟಡ ನಿರ್ಮಾಣ ಕಾರ್ಯದಲ್ಲಿ ತೊಡಗಿರುವ ಬಿಲ್ಡರ್‌ಗಳಿಗೆಕಿಮ್‌ ಅವರು ಧನ್ಯವಾದ ಹೇಳಿ ಪತ್ರ ಬರೆದಿದ್ದಾರೆ ಎಂದು ಉತ್ತರ ಕೊರೊಯಾ ಮಾಧ್ಯಮಗಳು ವರದಿ ಮಾಡಿವೆ. ಆ ಮೂಲಕ ಉತ್ತರ ಕೊರೊಯಾದ ಸರ್ವಾಧಿಕಾರಿ ನಾಯಕ ಜೀವಂತವಾಗಿದ್ದಾರೆ ಎಂದು ಮಾಧ್ಯಮಗಳು ತಿಳಿಸಿವೆ.

‘ಕಿಮ್‌ ಜಾಂಗ್‌ ಉನ್‌ ಬದುಕಿದ್ದಾರೆ ಮತ್ತು ಆರೋಗ್ಯವಾಗಿದ್ದಾರೆ. ಇದು ನಮ್ಮ ಸರ್ಕಾರದ ನಿಲುವು ದೃಢ,’ ಎಂದು ದಕ್ಷಿಣ ಕೊರಿಯಾದ ಅಧ್ಯಕ್ಷ ಮೂನ್‌ ಜೇಯ್‌ ಇನ್‌ ಅವರ ವಿದೇಶಾಂಗ ವ್ಯವಹಾರಗಳ ಸಲಹೆಗಾರ ಮೂನ್‌ ಚುಂಗ್‌ ಇನ್‌ ಅವರು ಭಾನುವಾರ ಹೇಳಿದ್ದರು.

ಕಿಮ್‌ ಅವರು ಶಸ್ತ್ರ ಚಿಕಿತ್ಸೆಗೆ ಒಳಗಾದ ನಂತರ ಅನಾರೋಗ್ಯಕ್ಕೆ ಈಡಾಗಿ ಸಾವನ್ನಪ್ಪಿದ್ದಾರೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿದ್ದವು. ಇದನ್ನು ಅಲ್ಲಗಳೆದಿದ್ದ ಉತ್ತರ ಕೊರೊಯಾ ಸರ್ಕಾರ ತಮ್ಮ ನಾಯಕ ಉತ್ತಮವಾಗಿದ್ದಾರೆಂದು ಸ್ಪಷ್ಟನೆ ನೀಡಿತ್ತು.

ಶಸ್ತ್ರಚಿಕಿತ್ಸೆ ಒಳಗಾದ ನಂತರ ಸಾರ್ವಜನಿಕವಾಗಿ ಕಿಮ್‌ ಅವರು ಕಾಣಿಸಿಕೊಳ್ಳದೇ ಇರುವುದು ಈ ಎಲ್ಲ ಊಹಾಪೋಹಗಳಿಗೆ ಕಾರಣವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT