ಕುಲಭೂಷಣ್‌ ಜಾಧವ್‌ ಪ್ರಕರಣ: ಇದೇ 17ಕ್ಕೆ ಐಸಿಜೆ ತೀರ್ಪು

ಭಾನುವಾರ, ಜೂಲೈ 21, 2019
27 °C

ಕುಲಭೂಷಣ್‌ ಜಾಧವ್‌ ಪ್ರಕರಣ: ಇದೇ 17ಕ್ಕೆ ಐಸಿಜೆ ತೀರ್ಪು

Published:
Updated:

ಇಸ್ಲಾಮಾಬಾದ್‌: ಭಾರತೀಯ ನೌಕಾದಳದ ನಿವೃತ್ತ ಅಧಿಕಾರಿ ಕುಲಭೂಷಣ್‌ ಜಾಧವ್‌ ಅವರ ಕುರಿತು ಅಂತರರಾಷ್ಟ್ರೀಯ ನ್ಯಾಯಾಲಯ (ಐಸಿಜೆ) ಇದೇ 17ರಂದು ತೀರ್ಪು ನೀಡಲಿದೆ. ಆದರೆ ಆ ತೀರ್ಪನ್ನು ಈಗಲೇ ಊಹಿಸಲು ಸಾಧ್ಯವಿಲ್ಲ ಎಂದು ಪಾಕ್‌ ತಿಳಿಸಿದೆ.

ಗೂಢಚಾರಿಕೆ ಆರೋಪದ ಮೇರೆಗೆ ಜಾಧವ್‌ ಅವರಿಗೆಪಾಕಿಸ್ತಾನ ಸೇನಾ ನ್ಯಾಯಾಲಯ 2017ರ ಏಪ್ರಿಲ್‌ನಲ್ಲಿ ಮರಣದಂಡನೆ ಶಿಕ್ಷೆ ವಿಧಿಸಿತ್ತು. ಇದನ್ನು ಪ್ರಶ್ನಿಸಿ ಭಾರತ ಐಸಿಜೆ ಮೊರೆ ಹೋಗಿತ್ತು. ಬಲೂಚಿಸ್ತಾನ ಪ್ರಾಂತ್ಯ ಪ್ರವೇಶಿಸುವ ಸಂದರ್ಭದಲ್ಲಿ, 2016ರ ಮಾರ್ಚ್‌ 3ರಂದು ಭದ್ರತಾ ಪಡೆಗಳು ಜಾಧವ್‌ ಅವರನ್ನು ಬಂಧಿಸಿದ್ದವು ಎಂಬುದು ಪಾಕಿಸ್ತಾನದ ವಾದ.

‘ಜಾಧವ್‌ ಇರಾನ್‌ನಲ್ಲಿ ವ್ಯಾಪಾರ ನಡೆಸುತ್ತಿದ್ದರು. ಅವರನ್ನು ಅಲ್ಲಿಂದ ಅಪಹರಿಸಲಾಗಿದೆ’ ಎಂಬುದು ಭಾರತದ ಪ್ರತಿವಾದವಾಗಿದೆ.

ಕರ್ತಾರ್‌ಪುರ ಕಾರಿಡಾರ್‌: 14ಕ್ಕೆ ಸಭೆ
ಇಸ್ಲಾಮಾಬಾದ್‌ (ಪಿಟಿಐ):
ಕರ್ತಾರ್‌ಪುರ ಕಾರಿಡಾರ್‌ನ ಕರಡು ಒಪ್ಪಂದವನ್ನು ಅಂತಿಮಗೊಳಿಸುವ ಸಂಬಂಧ ಚರ್ಚಿಸಲು ಭಾರತ ಮತ್ತು ಪಾಕಿಸ್ತಾನದ ತಜ್ಞರ ಸಭೆ ಇದೇ 14ರಂದು ವಾಘಾ ಗಡಿಯಲ್ಲಿ ನಡೆಯಲಿದೆ ಎಂದು ಪಾಕಿಸ್ತಾನ ವಿದೇಶಾಂಗ ಕಚೇರಿ ಗುರುವಾರ ತಿಳಿಸಿದೆ.
 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !