ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ರೆಕ್ಸಿಟ್: ತಟಸ್ಥವಾಗಿರಲು ಜೆರೆಮಿ ಕಾರ್ಬಿನ್‌ ನಿರ್ಧಾರ

Last Updated 23 ನವೆಂಬರ್ 2019, 19:46 IST
ಅಕ್ಷರ ಗಾತ್ರ

ಲಂಡನ್‌ (ಎಎಫ್‌ಪಿ): ‘ಮುಂದಿನ ತಿಂಗಳು ನಾನು ಪ್ರಧಾನಮಂತ್ರಿಯಾದಲ್ಲಿ ಬ್ರೆಕ್ಸಿಟ್‌ ಕುರಿತು ಜನಮತಗಣನೆ ನಡೆಸಲಿದ್ದು, ಆಗ ನಾನು ತಟಸ್ಥವಾಗಿ ಉಳಿಯಲಿದ್ದೇನೆ’ ಎಂದು ಬ್ರಿಟಿಷ್‌ ಲೇಬರ್‌ ಪಕ್ಷದ ಮುಖಂಡ ಜೆರೆಮಿ ಕಾರ್ಬಿನ್‌ ಪ್ರತಿಕ್ರಿಯಿಸಿದ್ದಾರೆ.

‘ನಾನು ತಟಸ್ಥನಾಗಿ ಉಳಿಯಲಿದ್ದೇನೆ. ಇದರಿಂದ ವಿಶ್ವಾಸಾರ್ಹವಾದ ಫಲಿತಾಂಶ ಹೊರಬೀಳುವುದು ಸಾಧ್ಯವಾಗಲಿದೆ’ ಎಂದು ಶುಕ್ರವಾರ ಪ್ರಸಾರವಾದ ಬಿಬಿಸಿ ಕ್ವಶ್ಚನ್‌ ಟೈಮ್‌ ವಿಶೇಷ ಆವೃತ್ತಿಯ ಕಾರ್ಯಕ್ರಮದಲ್ಲಿ ಹೇಳಿದರು.

ಐರೋಪ್ಯ ಒಕ್ಕೂಟ ಮತ್ತು ಪ್ರಸ್ತುತ ಸರ್ಕಾರದ ನಡುವೆ ಆಗಿರುವ ಒಡಬಂಡಿಕೆ ಕುರಿತು ಮರುಚರ್ಚೆ ನಡೆಸಲು ಲೇಬರ್ ಪಕ್ಷ ಉದ್ದೇಶಿಸಿದೆ. ಕಾರ್ಬಿನ್ ಇದೇ ಮೊದಲ ಬಾರಿಗೆ ಈ ಕುರಿತು ಪ್ರತಿಕ್ರಿಯಿಸಿದ್ದಾರೆ.

‘ಇದು, ಯುರೋಪ್‌ ಜೊತೆಗೆ ವಾಣಿಜ್ಯ ಒಡಂಬಡಿಕೆ ಹೊಂದಬೇಕೇ ಅಥವಾ ಯುರೋಪಿಯನ್‌ ಒಕ್ಕೂಟದಲ್ಲಿಯೇ ಉಳಿಯಬೇಕೇ ಎಂಬುದು ಪ್ರಶ್ನೆ. ಆರು ತಿಂಗಳಲ್ಲಿ ಜನರ ಎದುರು ಇದೇ ಆಯ್ಕೆಯನ್ನು ನಾವು ಇಡುತ್ತೇವೆ’ ಎಂದು ವಿವರಿಸಿದರು.

ಬ್ರೆಕ್ಸಿಟ್‌ ವಿವಾದ ದೇಶದಲ್ಲಿ ಬಹುತೇಕ ಶ್ರಮಿಕ ಸಮುದಾಯವನ್ನು ಬಾಧಿಸಿದ್ದು, ಬಹುತೇಕ ಮಂದಿ ಯುರೋಪಿಯನ್‌ ಒಕ್ಕೂಟದಿಂದ ದೂರ ಉಳಿಯುವಂತೆ ಮತ ಹಾಕಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT