ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎರಡು ಸಾವಿರಕ್ಕೂ ಹೆಚ್ಚು ಹತ್ಯೆ ಮಾಡಿರುವುದಾಗಿ ಅಮ್ಮಾನ್‌ ಹೇಳಿಕೆ: ತನಿಖೆಗೆ ಆದೇಶ

Last Updated 22 ಜೂನ್ 2020, 11:18 IST
ಅಕ್ಷರ ಗಾತ್ರ

ಕೊಲಂಬೊ: ತಮಿಳು ಪ್ರತ್ಯೇಕತಾವಾದಿ ಗುಂಪಿನ ಪರವಾಗಿ ಎರಡು ಸಾವಿರಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಯ ಹತ್ಯೆ ಮಾಡಿರುವುದಾಗಿ ಲಿಬರೇಷನ್‌ ಟೈಗರ್ಸ್‌ ಆಫ್‌ ತಮಿಳ್‌ ಈಳಂ (ಎಲ್‌ಟಿಟಿಇ) ಉಗ್ರ ಸಂಘಟನೆಯ ಮಾಜಿ ಉಪನಾಯಕ ಕರುಣಾ ಅಮ್ಮಾನ್ ಹೇಳಿದ್ದು, ಈ ಬಗ್ಗೆ ತನಿಖೆ ನಡೆಸಲು ಶ್ರೀಲಂಕಾ ಸರ್ಕಾರ ಆದೇಶಿಸಿದೆ.

ಈ ಕೂಡಲೇ ಅಮ್ಮಾನ್‌‌‌‌ ಹೇಳಿಕೆಯ ಬಗ್ಗೆ ತನಿಖೆ ನಡೆಸುವಂತೆ ಹಿರಿಯ ಪೊಲೀಸ್‌ ಅಧಿಕಾರಿ ಚಂದನ ವಿಕ್ರಮರ್ತನ್‌, ಅಪರಾಧ ತನಿಖಾ ದಳಕ್ಕೆ ನಿರ್ದೇಶಿಸಿದ್ದಾರೆ ಎಂದು ರಕ್ಷಣಾ ಸಚಿವಾಲಯ ಪ್ರಕಟಿಸಿದೆ.

ಕಳೆದ ವಾರ ನಡೆದ ಚುನಾವಣಾ ಸಮಾವೇಶದಲ್ಲಿ ಮಾತನಾಡಿದ ಕರುಣಾ ಅಮ್ಮಾನ್‌‌‌‌ ಅಲಿಯಾಸ್‌ ವಿನಾಯಕ ಮುರಳೀಧರನ್‌, ನಾನುಎಲ್‌ಟಿಟಿಇಯಲ್ಲಿದ್ದಾಗ 2,000ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಯ ಹತ್ಯೆ ಮಾಡಿರುವುದಾಗಿ ಎಂಬ ಹೇಳಿಕೆ ನೀಡಿದ್ದರು.

ಕೋವಿಡ್‌–19ನಿಂದಾಗಿ ಎರಡು ಬಾರಿ ಮುಂದೂಡಲಾಗಿದ್ದ ಶ್ರೀಲಂಕಾದ ಸಂಸತ್ ಚುನಾವಣೆ ಆಗಸ್ಟ್‌ 5 ರಂದು ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT