ಅಮೆರಿಕದ ಮೂರು ನಗರಗಳಲ್ಲಿ 70 ಅನಿಲ ಸ್ಫೋಟ, ಪ್ರಾಣ ಹಾನಿ ಇಲ್ಲ

7

ಅಮೆರಿಕದ ಮೂರು ನಗರಗಳಲ್ಲಿ 70 ಅನಿಲ ಸ್ಫೋಟ, ಪ್ರಾಣ ಹಾನಿ ಇಲ್ಲ

Published:
Updated:

ಬಾಸ್ಟನ್:  ಉತ್ತರ ಬಾಸ್ಟನ್‍ನ ಮೂರು ನಗರಗಳಲ್ಲಿ 70 ಅನಿಲ ಸ್ಫೋಟ ಸಂಭವಿಸಿದ್ದು, 6 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ರಾಯಿಟರ್ಸ್  ವರದಿ ಮಾಡಿದೆ.

ಅಮೆರಿಕದ ಲಾರೆನ್ಸ್, ಆಂಡೋವರ್ ಮತ್ತು ನಾರ್ಥ್ ಆಂಡೋವರ್ ನಗರಗಳಲ್ಲಿ ಗುರುವಾರ ಮಧ್ಯಾಹ್ನ ಸ್ಫೋಟ ಸಂಭವಿಸಿದೆ ಎಂದು ಮೆಸಾಚ್ಯುಸೆಟ್ಸ್ ಪೊಲೀಸರು ಹೇಳಿದ್ದಾರೆ. ಅನಿಲ ಸ್ಫೋಟಗೊಂಡ ಪ್ರದೇಶದ ಜನರನ್ನು ಬೇರೆಡೆಗೆ ಸ್ಥಳಾಂತರಿಸುವ ಕಾರ್ಯ ಮುಂದುವರಿದಿದೆ,

 ಸದ್ಯ ಎಲ್ಲ ಗ್ಯಾಸ್ ಲೈನ್‍ಗಳನ್ನು ಸ್ಥಗಿತಗೊಳಿಸಲಾಗಿದ್ದು, ಇದನ್ನು ಸರಿಪಡಿಸಲು ಸ್ವಲ್ಪ ಹೊತ್ತು ಬೇಕಾಗುತ್ತದೆ ಎಂದು ಪೊಲೀಸರು ಟ್ವೀಟಿಸಿದ್ದಾರೆ.

ಸ್ಫೋಟಕ್ಕೆ ಕಾರಣ ಏನೆಂದು ಈಗ ಹೇಳಲು ಸಾಧ್ಯವಿಲ್ಲ. ಪರಿಸ್ಥಿತಿ ತಹಬಂದಿಗೆ ಬಂದ ನಂತರ ಜಂಟಿ ತನಿಖೆ ನಡೆಸಲಾಗುವುದು ಎಂದು ಮೆಸಾಚ್ಯುಸೆಟ್ಸ್ ಪೊಲೀಸರು ಹೇಳಿದ್ದಾರೆ.
 

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !