ಬುಧವಾರ, ನವೆಂಬರ್ 13, 2019
17 °C

ಉಗ್ರ ಸಂಘಟನೆಗಳ ಬಗ್ಗೆ ಪಾಕ್ ಮೃದು ನಿಲುವು: ಅಮೆರಿಕ ಆಕ್ಷೇಪ

Published:
Updated:

ನವದೆಹಲಿ: ‘ಲಷ್ಕರ್ ಎ ತಯಬಾ’, ‘ಜೈಷ್‌ ಎ ಮೊಹಮ್ಮದ್‘ ಭಯೋತ್ಪಾದಕ ಸಂಘಟನೆಗಳು ಭಾರತಕ್ಕೆ ಈಗಲೂ ಬೆದರಿಕೆ ಒಡ್ಡುತ್ತಿವೆ ಎಂದು ಅಮೆರಿಕ ಹೇಳಿದ್ದು, ಇವುಗಳ ಜೊತೆ ಗುರುತಿಸಿಕೊಂಡಿದ್ದವರಿಗೆ ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಿದ್ದ ಪಾಕಿಸ್ತಾನದ ಕ್ರಮವನ್ನು ಟೀಕಿಸಿದೆ.

ಅಮೆರಿಕ ಶುಕ್ರವಾರ ಬಿಡುಗಡೆ ಮಾಡಿದ್ದ ’ಭಯೋತ್ಪಾದನೆ ಕುರಿತ ದೇಶಗಳ ವರದಿ 2018‘ರಲ್ಲಿ ಈ ಅಂಶವನ್ನು ಉಲ್ಲೇಖಿಸಿದ್ದು, ಉಗ್ರರ ಚಟುವಟಿಕೆ ನಿಗ್ರಹಿಸಲು ಆರ್ಥಿಕ ಚಟುವಟಿಕೆ ಕಾರ್ಯಪಡೆ (ಎಫ್‌ಎಟಿಎಫ್‌) ಕಾರ್ಯಕ್ರಮವನ್ನು ಏಕರೂಪವಾಗಿ ಜಾರಿ ಮಾಡಲು ಪಾಕಿಸ್ತಾನ ವಿಫಲವಾಗಿದೆ ಎಂದಿದೆ.

ಉಗ್ರಗಾಮಿ ಸಂಘಟನೆಗಳಿಗೆ ಹಣಕಾಸಿನ ಹರಿವು ತಡೆಗೆ ಪಾಕಿಸ್ತಾನ ವಿಫಲವಾಗಿದೆ. ಎಲ್‌ಇಟಿ ಮತ್ತು ಅದರ ಸಂಯೋಜಿತ ಸಂಘಟನೆಗಳು ಈಗಲೂ ಹಣ ಕ್ರೋಡೀಕರಣದಲ್ಲಿ ತೊಡಗಿವೆ ಎಂದು ವರದಿ ಉಲ್ಲೇಖಿಸಿದೆ.

‘ಉಗ್ರರು 2018ರಲ್ಲೂ ಭೀತಿ ಮೂಡಿಸಿದ್ದರು. ಉದಾಹರಣೆಗೆ ಪಾಕ್ ಮೂಲದ ‘ಲಷ್ಕರ್ಎ ತಯಬಾ’ ಮುಂಬೈ ದಾಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರೆ, ಜೈಷ್‌ ಎ ಮೊಹಮ್ಮದ್ ಸಂಘಟನೆ ಭಾರತ ಮತ್ತು ಅಫ್ಗಾನಿಸ್ತಾನ ಗುರಿಯಾಗಿಸಿ ದಾಳಿ ನಡೆಸುತ್ತಿದೆ’ ಎಂದು ತಿಳಿಸಿದೆ.

ಪ್ರತಿಕ್ರಿಯಿಸಿ (+)