ಮಂಗಳವಾರ, ಜುಲೈ 14, 2020
28 °C

ತಾವು ಮಿಸ್‌ ಮಾಡಿಕೊಳ್ಳುತ್ತಿರುವುದನ್ನು ಚಿತ್ರಗಳ ಮೂಲಕ ಜಗಕ್ಕೆ ತೋರಿಸಿದ ಮಕ್ಕಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊರೊನಾ ಸೋಂಕಿನಿಂದ ಜಗತ್ತಿನ ಬಹುತೇಕ ದೇಶಗಳು ತಲ್ಲಣಿಸಿವೆ. ಈಗಾಗಲೇ ಕೊರೊನಾ ವೈರಸ್‌ ಸೋಂಕಿಗೆ ಜಗತ್ತಿನಾದ್ಯಂತ ಲಕ್ಷಾಂತರ ಜನರು ಪ್ರಾಣ ಕಳೆದುಕೊಂಡಿದ್ದಾರೆ. 

ಯುರೋಪ್‌ ಮತ್ತು ಅಮೆರಿಕಗಳನ್ನು ಅತಿಹೆಚ್ಚು ಆತಂಕಕ್ಕೀಡು ಮಾಡಿರುವ ಕೊರೊನಾ ಸೋಂಕು ಜನರ ಜೀವನಕ್ರಮವನ್ನೇ ಏರುಪೇರು ಮಾಡಿದೆ. 

ಕೊರೊನಾ ಸೋಂಕು ಹರಡುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ಅಮೆರಿಕಾ ಮತ್ತು ಯುರೋಪಿನ ಬಹುತೇಕ ರಾಷ್ಟ್ರಗಳಲ್ಲಿ ಸಂಪೂರ್ಣ ನಿರ್ಬಂಧ (ಲಾಕ್‌ಡೌನ್‌) ಹೇರಲಾಗಿದೆ. ಲಾಕ್‌ಡೌನ್‌ ಪರಿಣಾಮ ಬಹುತೇಕರು ಹೊರಬರದೇ ತಮ್ಮ ಮನೆಗಳಲ್ಲಿಯೇ ಉಳಿದುಕೊಂಡು ಬದುಕು ಸಾಗಿಸುವುದು ಅನಿವಾರ್ಯವಾಗಿದೆ. 

ಮಕ್ಕಳು, ಯುವಕರು, ಮಧ್ಯವಯಸ್ಕರರು ಮತ್ತು ಇಳಿವಯಸ್ಸಿನ ಹಿರಿಯರ ಮೇಲೆ ಈ ಲಾಕ್‌ಡೌನ್‌ ಪರಿಣಾಮ ಬೀರಿದೆ. ಸಂಬಂಧಿಗಳು, ಸ್ನೇಹಿತರು ಮತ್ತು ಸಹೋದ್ಯೋಗಿಗಳನ್ನು ಎಲ್ಲರೂ ಮಿಸ್‌ ಮಾಡಿಕೊಳ್ಳುತ್ತಿದ್ದಾರೆ. 

ವಿಶೇಷವಾಗಿ ಮಕ್ಕಳು ತಮ್ಮ ಶಾಲೆ, ಶಿಕ್ಷಕರು, ಸ್ನೇಹಿತರು, ಆಟಗಳನ್ನು ಮಿಸ್‌ ಮಾಡಿಕೊಳ್ಳುತ್ತಿದ್ದಾರೆ. ಲಾಕ್‌ಡೌನ್‌ ಸಮಯದಲ್ಲಿ ಮಕ್ಕಳು ತಾವೇನು ಮಿಸ್‌ ಮಾಡಿಕೊಳ್ಳುತ್ತಿದ್ದೀವಿ ಎಂಬುದನ್ನು ತಾವೇ ಬಿಡಿಸಿದ ಚಿತ್ರಗಳ ಮೂಲಕ ಜಗತ್ತಿನ ಮುಂದೆ ಪ್ರದರ್ಶಿಸಿದ್ದಾರೆ.  

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು