ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಲಂಡನ್‌ ವಿಶ್ವದ ಅತ್ಯುತ್ತಮ ವಿದ್ಯಾರ್ಥಿ ನಗರ’

ಜಾಗತಿಕ ರ್‍ಯಾಂಕಿಂಗ್‌ನಲ್ಲಿ ಬೆಂಗಳೂರಿಗೆ 81ನೇ ಸ್ಥಾನ
Last Updated 31 ಜುಲೈ 2019, 18:43 IST
ಅಕ್ಷರ ಗಾತ್ರ

ಲಂಡನ್‌: ಬ್ರಿಟನ್‌ ರಾಜಧಾನಿ ಲಂಡನ್‌ ಸತತ ಎರಡನೇ ವರ್ಷವೂ ವಿಶ್ವದ ‘ಅತ್ಯುತ್ತಮ ವಿದ್ಯಾರ್ಥಿ ನಗರ’ವಾಗಿ ಹೊರಹೊಮ್ಮಿದೆ.

ಜಾಗತಿಕ ರ್‍ಯಾಂಕಿಂಗ್‌ನಲ್ಲಿ ಜಪಾನಿನ ಟೋಕಿಯೊ, ಆಸ್ಟ್ರೇಲಿಯಾದ ಮೆಲ್ಬೋರ್ನ್‌ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಪಡೆದಿವೆ.

ಈ ಪಟ್ಟಿಯಲ್ಲಿ 81ನೇ ಸ್ಥಾನ ಪಡೆದಿರುವ ಬೆಂಗಳೂರು ಭಾರತದ ಅತ್ಯುತ್ತಮ ವಿದ್ಯಾರ್ಥಿ ಸ್ನೇಹಿ ನಗರ ಎಂಬ ಹಿರಿಮೆ ಪಡೆದಿದೆ. ಜಗತ್ತಿನ 120 ರಾಷ್ಟ್ರಗಳ ಪಟ್ಟಿಯಲ್ಲಿ ಮುಂಬೈ (85), ದೆಹಲಿ (113) ಹಾಗೂ ಚೆನ್ನೈ (115) ಸ್ಥಾನ ಪಡೆದಿವೆ.

ಜಾಗತಿಕ ಶೈಕ್ಷಣಿಕ ಕನ್ಸಲ್ಟೆನ್ಸಿ ‘ಕ್ವಾಕ್ವೆರೆಲ್ಲಿ ಸೈಮಂಡ್ಸ್’ ಕಂಪನಿ ‘ಕ್ಯೂಎಸ್ ಅತ್ಯುತ್ತಮ ವಿದ್ಯಾರ್ಥಿ ನಗರಗಳ ರ್‍ಯಾಂಕಿಂಗ್‌’ ಸಿದ್ಧಪಡಿಸಿದೆ. ಇದಕ್ಕಾಗಿ ವಿವಿಧ ಮಾನದಂಡಗಳು ಹಾಗೂ ವಿದ್ಯಾರ್ಥಿಗಳ ಪ್ರತಿಕ್ರಿಯೆಗಳನ್ನು ಪರಿಗಣಿಸಲಾಗಿತ್ತು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT