ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜಿ–7’ ಶೃಂಗಸಭೆಗೆ ಪ್ರತಿಭಟನೆ ಬಿಸಿ: 15 ಸಾವಿರ ಜನರಿಂದ ಬೃಹತ್ ರ್‍ಯಾಲಿ

Last Updated 24 ಆಗಸ್ಟ್ 2019, 20:00 IST
ಅಕ್ಷರ ಗಾತ್ರ

ಬಿಯರಿಟ್ಜ್‌ (ಫ್ರಾನ್ಸ್): ಜಿ–7 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ವಿಶ್ವದ ಏಳು ಆರ್ಥಿಕ ಶ್ರೀಮಂತ ರಾಷ್ಟ್ರಗಳ ನಾಯಕರು ಆಗಮಿಸುತ್ತಿದ್ದರೆ, ಇತ್ತ ಜಿ–7 ವಿರೋಧಿಸುವ 15 ಸಾವಿರಕ್ಕೂ ಹೆಚ್ಚು ಪ್ರತಿಭಟನಕಾರರು ಫ್ರಾನ್ಸ್–ಸ್ಪೇನ್ ಗಡಿಯಲ್ಲಿ ಶನಿವಾರ ಬೃಹತ್ ರ್‍ಯಾಲಿ ನಡೆಸಿದರು.

ಬಂಡವಾಳಶಾಹಿ ವಿರೋಧಿಗಳು, ಪರಿಸರ ಸಂರಕ್ಷಣಾ ಕಾರ್ಯಕರ್ತರು ಹಾಗೂ ಫ್ರಾನ್ಸ್ ಸರ್ಕಾರದ ವಿರೋಧಿ ಪಡೆ ‘ಯೆಲ್ಲೊ ವೆಸ್ಟ್‌’ನ ಸದಸ್ಯರು ಈ ರ್‍ಯಾಲಿಯಲ್ಲಿ ಭಾಗವಹಿಸಿದ್ದರು.

‘ನಾಯಕರೇ: ಅಮೆಜಾನ್ ಕಾಡು ಹೊತ್ತಿ ಉರಿಯುತ್ತಿದೆ, ಕ್ರಮ ಕೈಗೊಳ್ಳಿ’ ಎನ್ನುವ ಭಿತ್ತಿಪತ್ರ ರ್‍ಯಾಲಿಯಲ್ಲಿ ಕಂಡುಬಂದಿತು.

ಶೃಂಗಸಭೆಯ ಅಧಿಕೃತ ಆರಂಭಕ್ಕೂ ಕೆಲವೇ ತಾಸು ಮೊದಲು, ದೇಶವನ್ನು ಉದ್ದೇಶಿಸಿ ಮಾತನಾಡಿದಫ್ರಾನ್ಸ್ ಅಧ್ಯಕ್ಷ ಎಮ್ಯಾನುವಲ್ ಮ್ಯಾಕ್ರನ್ ಅವರು ‘ಶಾಂತಿ ಮತ್ತು ಒಗ್ಗಟ್ಟಿಗೆ ಕರೆ ನೀಡಲು ಬಯಸುತ್ತೇನೆ’ ಎಂದು ಹೇಳಿದರು.

ನಾವು ಒಗ್ಗಟ್ಟಾಗದೆ ಇದ್ದರೆ, ದೊಡ್ಡ ಸವಾಲುಗಳನ್ನು ಎದುರಿಸಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದರು.

‘ವಾಣಿಜ್ಯಿಕ ಬಿಕ್ಕಟ್ಟುಗಳು ಎಲ್ಲರಿಗೂ ಕೆಡುಕು ಉಂಟು ಮಾಡುತ್ತವೆ. ಇದನ್ನು ಜಿ–7 ಸಹಭಾಗಿ ರಾಷ್ಟ್ರಗಳಿಗೆ ಮನವರಿಕೆ ಮಾಡಿಕೊಡುವುದು ನನ್ನ ಗುರಿ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT