ಬುಧವಾರ, ಸೆಪ್ಟೆಂಬರ್ 18, 2019
28 °C

ಮದುವೆಯಾದ ಕೆಲವೇ ನಿಮಿಷಗಳಲ್ಲಿ ಅಪಘಾತಕ್ಕೆ ಬಲಿಯಾದ ನವ ಜೋಡಿ

Published:
Updated:

ಟೆಕ್ಸಾಸ್‌: ಅವರು ಬಾಲ್ಯದ ಗೆಳೆಯರು, ಆ ಗೆಳೆತನ ಪ್ರೀತಿಗೆ ತಿರುಗಿ ಬಾಳ ಸಂಗಾತಿಗಳಾದರು. ಇವರ ಬಾಳಲ್ಲಿ ಆ ಖುಷಿ ಬಹಳ ಹೊತ್ತು ಉಳಿಯಲಿಲ್ಲ! ಮದುವೆಯಾದ ಕೆಲವೇ ನಿಮಿಷಗಳಲ್ಲಿ ಈ ನವ ಜೋಡಿ ಕುಟುಂಬದವರ ಕಣ್ಣ ಮುಂದೆಯೇ ಅಪಘಾತಕ್ಕೆ ಬಲಿಯಾಯಿತು.

ಈ ಹೃದಯ ವಿದ್ರಾವಕ ಘಟನೆ ನಡೆದಿರುವುದು ಅಮೆರಿಕದ ಟೆಕ್ಸಾಸ್‌ನಲ್ಲಿ. 19 ವರ್ಷದ ಮೊರ್ಗಾನ್‌ ಹಾಗೂ 20 ವರ್ಷದ ವದು ಬುರೇಡೆಕ್ಸ್‌ ಕ್ರೂರ ವಿಧಿಯ ಆಟಕ್ಕೆ ಬಲಿಯಾದ ನವ ಜೋಡಿಗಳು. 

ಘಟನೆಯ ವಿವರ

ಪರಸ್ಪರ ಪ್ರೀತಿಸುತ್ತಿದ್ದ ಮೊರ್ಗಾನ್‌ ಮತ್ತು ಬೌಡ್ರಿಯಾಕ್ಸ್‌ ಕುಟುಂಬದವರ ಒಪ್ಪಿಗೆ ಪಡೆದು ವಿವಾಹ ಬಂಧನಕ್ಕೆ ಒಳಪಟ್ಟಿದ್ದರು. ಕಳೆದ ಶುಕ್ರವಾರ ಎರಡೂ ಕುಟುಂಬಗಳ ಸಮ್ಮತಿಯಂತೆ ಇಲ್ಲಿನ ಜನಪ್ರಿಯ ಜಾಯ್ ಡಿಬೋಸ್‌ ಚರ್ಚ್‌ನಲ್ಲಿ ವಿವಾಹ ಸಮಾರಂಭ ಆಯೋಜಿಸಿದ್ದರು. ಎರಡೂ ಕುಟುಂಬಗಳ ಸದಸ್ಯರು, ಗೆಳೆಯರು ಮದುಗೆ ಆಗಮಿಸಿದ್ದರು. ಮದುವೆ ಮುಗಿದ ಬಳಿಕ ನವ ಜೋಡಿ ಚರ್ಚ್‌ನಿಂದ ಆರತಕ್ಷತೆ ಕಾರ್ಯಕ್ರಮ ಆಯೋಜಿಸಿದ್ದ ಸ್ಥಳಕ್ಕೆ ಹೊರಡಲು ಅಣಿಯಾಯಿತು.

ಸಂಪ್ರದಾಯದಂತೆ ಮೊರ್ಗಾನ್‌, ಬೌಡ್ರಿಯಾಕ್ಸ್‌ ಕೈ ಹಿಡಿದು ಕಾರಿನಲ್ಲಿ ಕೂರಿಸಿ, ಕಾರು ಚಲಾಯಿಸಲು ಮುಂದಾದರು. ಈ ಸಂಭ್ರಮದ ಕ್ಷಣಗಳನ್ನು ಎರಡು ಕುಟುಂಬದವರು ಕಣ್ತುಂಬಿಕೊಳ್ಳುತ್ತಿದ್ದರು. ಮೊರ್ಗಾನ್‌ ಚಲಾಯಿಸುತ್ತಿದ್ದ ಕಾರು ಚರ್ಚ್‌ ಮುಂದಿನ ಹೆದ್ದಾರಿಯನ್ನು ಪ್ರವೇಶಿಸುತ್ತಿರುವಂತೆಯೇ ವೇಗವಾಗಿ ಬಂದ ಟ್ರಕ್‌ ನವಜೋಡಿಯಿದ್ದ ಕಾರಿಗೆ ಡಿಕ್ಕಿ ಹೊಡೆಯಿತು. 

ಅಪಘಾತದ ರಭಸಕ್ಕೆ ಕಾರು ಮೂರು ಪಲ್ಟಿ ಹೊಡೆಯಿತು. ಕಾರಿನಲ್ಲಿದ್ದ ಮೊರ್ಗಾನ್‌ ಮತ್ತು ಬೌಡ್ರಿಯಾಕ್ಸ್‌ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದರು. ಮೃತರ ಕುಟುಂಬದವರು ಮತ್ತು ಗೆಳೆಯರ ರೋದನ ಮುಗಿಲು ಮುಟ್ಟಿತ್ತು. ‘ಮುದ್ದಾಗಿ ಸಾಕಿದ ಮಗನನ್ನು ಕಳೆದಕೊಂಡೆ’ ಎಂದು ಮೋರ್ಗನ್‌ ತಾಯಿ ದುಖಿಸುತ್ತಿದ್ದರು. 

ಟ್ರಕ್‌ ಮಾಲೀಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

Post Comments (+)