ಬುಧವಾರ, ನವೆಂಬರ್ 13, 2019
23 °C

ಸಹೋದ್ಯೋಗಿ ಜೊತೆ ಸಂಬಂಧ: ಮೆಕ್‌ ಡೊನಾಲ್ಡ್ಸ್‌ ಕಂಪನಿ ಸಿಇಒ ಹೊರಕ್ಕೆ

Published:
Updated:
Prajavani

ನ್ಯೂಯಾರ್ಕ್: ಸಹೋದ್ಯೋಗಿ ಜೊತೆ ಒಮ್ಮತದ ಸಂಬಂಧ ಇರಿಸಿಕೊಂಡಿದ್ದ ಆರೋಪದಲ್ಲಿ ಮೆಕ್‌ ಡೊನಾಲ್ಡ್ಸ್‌ ಕಂಪನಿಯ ಅಧ್ಯಕ್ಷ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಸ್ಟೀವ್‌ ಈಸ್ಟರ್‌ಬ್ರೂಕ್‌ ಅವರನ್ನು ಹೊರಹಾಕಲಾಗಿದೆ.

ಸ್ಟೀವ್‌ ಸ್ಥಾನಕ್ಕೆ ಕಂಪನಿಯ ಅಮೆರಿಕ ವಿಭಾಗದ ಅಧ್ಯಕ್ಷ ಕ್ರಿಸ್‌ ಕೆಂಪ್‌ಜಿನ್ಸ್ಕಿ ಅವರನ್ನು ನೇಮಕ ಮಾಡಲಾಗಿದೆ. ನಿರ್ದೇಶಕರ ಮಂಡಳಿಗೂ ಅವರನ್ನು ಆಯ್ಕೆ ಮಾಡಲಾಗಿದೆ.

’ಸ್ಟೀವ್‌ ಅವರು ಕಂಪನಿಯ ನಿಯಮಗಳನ್ನು ಉಲ್ಲಂಘಿಸಿದ್ದಾರೆ‘ ಎಂದು ಕಂಪನಿ ಹೇಳಿಕೆಯಲ್ಲಿ ತಿಳಿಸಿದೆ.

ಕಂಪನಿಯ ನಾಯಕತ್ವ ಹಾಗೂ ಕಾರ್ಯಕ್ಷಮತೆಗೆ ಸಂಬಂಧಿಸಿ ಈ ಬದಲಾವಣೆ ಮಾಡಿಲ್ಲ ಎಂದೂ ಸ್ಪಷ್ಟಪಡಿಸಿದೆ.

‘ಸಹೋದ್ಯೋಗಿ ಜೊತೆ ಸಂಬಂಧ ಇರಿಸಿಕೊಳ್ಳುವ ಮೂಲಕ ತಪ್ಪೆಸಗಿದ್ದೇನೆ. ಇದು ಕಂಪನಿಯ ನಿಯಮಗಳ ಉಲ್ಲಂಘಿನೆಯಾಗಿದೆ. ಕಂಪನಿ ತೀರ್ಮಾನಕ್ಕೆ ಬದ್ಧನಾಗಿದ್ದೇನೆ ‘ ಎಂದು ಸ್ಟೀವ್‌ ಅವರು ನೌಕರರಿಗೆ ಮಾಡಿರುವ ಇ–ಮೇಲ್‌ನಲ್ಲಿ ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)