ಭಾನುವಾರ, ಏಪ್ರಿಲ್ 18, 2021
31 °C

ನೀರಿನಲ್ಲಿ ಕೊರೊನಾ ವೈರಸ್‌!

ಪಿಟಿಐ Updated:

ಅಕ್ಷರ ಗಾತ್ರ : | |

ಪ್ಯಾರಿಸ್‌: ಕುಡಿಯಲು ಅಲ್ಲದ, ಬಳಕೆಗೆ ಸೀಮಿತವಾದ ನೀರಿನಲ್ಲಿ ಕೊರೊನಾ ವೈರಸ್‌ನ ಅಲ್ಪ ಪ್ರಮಾಣದ ಕುರುಹುಗಳು ಕಂಡು ಬಂದಿರುವುದು ಸದ್ಯ ಬಯಲಾಗಿದೆ. 

ಪ್ಯಾರಿಸ್‌ನಲ್ಲಿ ರಸ್ತೆಯನ್ನು ಶುಚಿಗೊಳಿಸಲು ಬಳಸಲಾಗುವ ನೀರಿನಲ್ಲಿ ಸಣ್ಣ ಪ್ರಮಾಣದಲ್ಲಿ ಕೊರೊನಾ ವೈರಸ್‌ಗಳು ಪತ್ತೆಯಾಗಿದೆ. ಆದರೆ, ಕುಡಿಯುವ ನೀರಿನಲ್ಲಿ ಅವುಗಳು ಪತ್ತೆಯಾಗಿಲ್ಲ ಎಂದು ಪ್ಯಾರಿಸ್‌ ನಗರದ ಅಧಿಕಾರಿ ತಿಳಿಸಿದ್ದಾರೆ. 

ಪ್ಯಾರಿಸ್ ನೀರು ಪ್ರಾಧಿಕಾರ ಪ್ರಯೋಗಲಯವು ನಗರದ ಸುತ್ತಲೂ ಸಂಗ್ರಹಿಸಿದ 27 ಮಾದರಿಗಳ ಪೈಕಿ ನಾಲ್ಕರಲ್ಲಿ ಸಣ್ಣ ಪ್ರಮಾಣದ ವೈರಸ್ ಪತ್ತೆಯಾಗಿವೆ. ಈ ಹಿನ್ನೆಲೆಯಲ್ಲಿ ನೀರಿನ ಮೂಲವನ್ನು ಬಂದ್‌ ಮಾಡಲಾಗಿದೆ ಎಂದು ಪ್ಯಾರಿಸ್‌ನ ಪರಿಸರ ಅಧಿಕಾರಿ ಸೆಲಿಯಾ ಬ್ಲೇಯೆಲ್ ಎಂಬುವವರು ಸುದ್ದಿ ಸಂಸ್ಥೆಗಳಿಗೆ ಮಾಹಿತಿ ನೀಡಿದ್ದಾರೆ. 

ನಗರದ ಕುಡಿಯುವ ನೀರಿನ ಜಾಲವು ಸಂಪೂರ್ಣ ಸ್ವತಂತ್ರ ಮತ್ತು ಸಂರಕ್ಷಣೆಗೊಂಡಿದೆ. ಈ ನೀರಿನಲ್ಲಿ ಅಪಾಯವಿಲ್ಲ ಎಂದು ಪ್ಯಾರಿಸ್‌ ಬ್ಲೇಯೆಲ್‌ ತಿಳಿಸಿದ್ದಾರೆ. 

ಪ್ಯಾರಿಸ್‌ನಲ್ಲಿ ಕುಡಿಯುವ ಉದ್ದೇಶಕ್ಕಲ್ಲದೇ, ಬಳಕೆಗಾಗಿ ನೀರನ್ನು ಸೀನ್‌ ನದಿ ಮತ್ತು ಅವರ್ಕ್‌ ಕಾಲುವೆಯಿಂದ ಪೂರೈಸಲಾಗುತ್ತಿದೆ. ಇದನ್ನು ನಗರದ ಶುಚಿ ಕಾರ್ಯಕ್ಕೆ, ಪ್ಯಾರಿಸ್‌ನ ಉದ್ಯಾನಗಳಲ್ಲಿ ಗಿಡಗಳಿಗಾಗಿ ಬಳಕೆ ಮಾಡಲಾಗುತ್ತದೆ. ಸದ್ಯ ಇದರ ಬಳಕೆಯನ್ನು ನಿರ್ಬಂಧಿಸಲಾಗಿದೆ. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು