ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕ್: ಬಾಂಬ್ ಸ್ಫೋಟಕ್ಕೆ ಐವರು ಬಲಿ

ಬಲೂಚಿಸ್ತಾನ ಪ್ರಾಂತ್ಯದಲ್ಲಿ ಪ್ರಾರ್ಥನೆ ವೇಳೆ ದುರ್ಘಟನೆ
Last Updated 16 ಆಗಸ್ಟ್ 2019, 14:43 IST
ಅಕ್ಷರ ಗಾತ್ರ

ಕರಾಚಿ:ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯದ ಕ್ವೆಟ್ಟಾ ಕುಲ್ಚಕ್‌ನಲ್ಲಿ ಶುಕ್ರವಾರ ಮಸೀದಿಯೊಳಗೆ ಪ್ರಾರ್ಥನೆ ವೇಳೆ ಪ್ರಬಲ ಬಾಂಬ್ ಸ್ಫೋಟಗೊಂಡು ಐದು ಮಂದಿ ಸಾವಿಗೀಡಾಗಿದ್ದು, 15 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸುಮಾರು 8ರಿಂದ 10 ಕೆಜಿ ಸಾಮರ್ಥ್ಯದ ಸ್ಫೋಟಕ ವಸ್ತು ಬಾಂಬ್‌ನಲ್ಲಿದ್ದಿರಬಹುದೆಂದು ಅಂದಾಜಿಸಲಾಗಿದ್ದು, ಬಾಂಬ್ ಅನ್ನು ಮಸೀದಿಯ ಒಳಗೇ ಅಡಗಿಸಿಡಲಾಗಿತ್ತು ಎನ್ನಲಾಗಿದೆ.

ಸ್ಫೋಟದ ಹೊಣೆಯನ್ನು ಇದುವರೆಗೂ ಯಾವ ಸಂಘಟನೆಯೂ ಹೊತ್ತುಕೊಂಡಿಲ್ಲ. ಕುಲ್ಚಕ್‌ನಲ್ಲಿ ತಿಂಗಳೊಪ್ಪತ್ತಿನಲ್ಲಿ ಇದು ನಾಲ್ಕನೇ ಬಾಂಬ್ ಸ್ಫೋಟವಾಗಿದೆ. ಹದಿನೈದು ದಿನಗಳ ಹಿಂದೆಯಷ್ಟೇ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ ಇಬ್ಬರು ಪೊಲೀಸರು ಸೇರಿದಂತೆ ಐದು ಮಂದಿ ಸಾವನ್ನಪ್ಪಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT