ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಂಬಾಬ್ವೆಗೆ ಮುಗಾಬೆ ಪಾರ್ಥಿವ ಶರೀರ

Last Updated 11 ಸೆಪ್ಟೆಂಬರ್ 2019, 19:19 IST
ಅಕ್ಷರ ಗಾತ್ರ

ಸಿಂಗಪುರ:ಜಿಂಬಾಬ್ವೆ ಮಾಜಿ ಅಧ್ಯಕ್ಷ ರಾಬರ್ಟ್‌ಮುಗಾಬೆ ಅವರ ಮೃತದೇಹವನ್ನು ಬುಧವಾರ ಸಿಂಗಪುರದಿಂದ ಜಿಂಬಾಬ್ವೆಗೆ ಕೊಂಡೊಯ್ಯಲಾಯಿತು.

ಕಳೆದ ಶುಕ್ರವಾರತೀವ್ರ ಅನಾರೋಗ್ಯದಿಂದಸಿಂಗಪುರದ ಆಸ್ಪತ್ರೆಯಲ್ಲಿ ಮುಗಾಬೆ ನಿಧನರಾಗಿದ್ದರು.

ಬ್ರಿಟನ್‌ ಆಡಳಿತದಿಂದ ಜಿಂಬಾಬ್ವೆ ಸ್ವಾತಂತ್ರ್ಯ ಪಡೆದ ಬಳಿಕ 2017ರವರೆಗೆ37 ವರ್ಷಗಳ ಕಾಲ ಮುಗಾಬೆಆಡಳಿತ ನಡೆಸಿದ್ದರು. ಮೃತದೇಹವನ್ನು ಕೊಂಡೊಯ್ಯಲು ಜಿಂಬಾಬ್ವೆಉಪಾಧ್ಯಕ್ಷ ಕೆಂಬೊ ಮೊಹದಿ ಅವರಿದ್ದ ನಿಯೋಗ ಮಂಗಳವಾರಸಿಂಗಪುರಕ್ಕೆ ಆಗಮಿಸಿತ್ತು. ಬುಧವಾರ ಬೆಳಗ್ಗೆ ಪೊಲೀಸ್‌ ಬೆಂಗಾವಲಲ್ಲಿ ವಿಮಾನ ನಿಲ್ದಾಣದವರೆಗೆ ಮೃತದೇಹವನ್ನು ಕೊಂಡೊಯ್ಯಲಾಯಿತು. ಶನಿವಾರ ರಾಷ್ಟ್ರೀಯ ಕ್ರೀಡಾ ಮೈದಾನದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಭಾನುವಾರ ಅಂತ್ಯಕ್ರಿಯೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT