‘ರೋಹಿಂಗ್ಯಾ ಮುಸ್ಲಿಮರ ಮೇಲೆ ವ್ಯವಸ್ಥಿತ ದಾಳಿ’

7
ಮ್ಯಾನ್ಮಾರ್‌ ಸೇನಾಧಿಕಾರಿಗಳ ವಿರುದ್ಧ ಅಮ್ನೆಸ್ಟಿ ಆರೋಪ

‘ರೋಹಿಂಗ್ಯಾ ಮುಸ್ಲಿಮರ ಮೇಲೆ ವ್ಯವಸ್ಥಿತ ದಾಳಿ’

Published:
Updated:

ನ್ಯೂಯಾರ್ಕ್‌: ‘ಮ್ಯಾನ್ಮಾರ್‌ ಸೇನಾ ಮುಖ್ಯಸ್ಥ ಮಿನ್‌ ಆಂಗ್‌ ಹ್ಲೆಂಗ್‌ ಮತ್ತು ಇತರ 12 ಹಿರಿಯ ಸೇನಾಧಿಕಾರಿಗಳು, ರೋಹಿಂಗ್ಯಾ ಮುಸ್ಲಿಮರ ಮೇಲಿನ ವ್ಯವಸ್ಥಿತ ದಾಳಿಯ ಮೇಲ್ವಿಚಾರಣೆ ವಹಿಸಿದ್ದರು’ ಎಂದು ಮಾನವ ಹಕ್ಕು ಸಂಘಟನೆ ಅಮ್ನೆಸ್ಟಿ ಇಂಟರ್‌ನ್ಯಾಷನಲ್‌ ಆರೋಪಿಸಿದೆ.

ಈ ಕುರಿತು ಸಂಘಟನೆಯು 186 ಪುಟಗಳ ವರದಿ ಬಿಡುಗಡೆ ಮಾಡಿದ್ದು, ‘ಅಂತರರಾಷ್ಟ್ರೀಯ ಅಪರಾಧ ನ್ಯಾಯಾಲಯದ ಮೂಲಕ ಕ್ರಮ ಜರುಗಿಸಬೇಕು’ ಎಂದು ಒತ್ತಾಯಿಸಿದೆ.

‘ಸಾವಿರಾರು ಜನರ ಹತ್ಯೆ ಮಾಡಲಾಗಿದೆ. ಉದ್ದೇಶಪೂರ್ವಕ ದಾಳಿಗಳ ಮೂಲಕ ದೇಶ ತೊರೆಯುವಂತೆ ಮಾಡಲಾಗಿದೆ’ ಎಂದು ತಿಳಿಸಿದೆ.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !