₹ 9.4 ಕೋಟಿ ಮೌಲ್ಯದ ವನ್ಯಜೀವಿ ಅಂಗಾಂಗ ನಾಶ

7

₹ 9.4 ಕೋಟಿ ಮೌಲ್ಯದ ವನ್ಯಜೀವಿ ಅಂಗಾಂಗ ನಾಶ

Published:
Updated:
Deccan Herald

ನೈಯಿಪಿಡಾವ್: ಆನೆ ಚರ್ಮ, ಹುಲಿ ಮೂಳೆ, ಜಿಂಕೆ ಕೊಂಬು ಸೇರಿದಂತೆ ₹9.4 ಕೋಟಿ ಮೌಲ್ಯದ ವನ್ಯಜೀವಿಗಳ ಅಂಗಾಂಗಗಳನ್ನು ಮ್ಯಾನ್ಮಾರ್ ಸರ್ಕಾರವು ಗುರುವಾರ ಸಾರ್ವಜನಿಕವಾಗಿ ಬೆಂಕಿಗೆ ಆಹುತಿ ನೀಡಿತು.

ಮ್ಯಾನ್ಮಾರ್‌ನ ಗಡಿ ಭಾಗದಲ್ಲಿ ವನ್ಯಜೀವಿಗಳ ಅವ್ಯಾಹತ ಸಾಗಾಟ ನಡೆದಿದೆ. ನೆರೆಯ ಚೀನಾದಲ್ಲಿ ಪ್ರಾಣಿಗಳ ಅಂಗಾಂಗಳಿಗೆ ಬಹು ಬೇಡಿಕೆಯಿದೆ. ಅಳಿವಿನಂಚಿನಲ್ಲಿರುವ ವನ್ಯಜೀವಿಗಳು ಹಾಗೂ ಅವುಗಳ ಅಂಗಾಂಗಳ ಅಕ್ರಮ ಸಾಗಾಟವನ್ನು ಸರ್ಕಾರ ಸಹಿಸುವುದಿಲ್ಲ ಎಂಬ ಸಂದೇಶವನ್ನು ರವಾನಿಸಲಾಯಿತು.

‘ಅಪರೂಪದ ಮ್ಯಾನ್ಮಾರ್ ಆನೆ, ಹುಲಿ, ಕರಡಿ ಹಾಗೂ ಪ್ಯಾಂಗೊಲಿನ್‌ಗಳು ದೇಶದ ನೈಸರ್ಗಿಕ ಪರಂಪರೆಯನ್ನು ಬಿಂಬಿಸುತ್ತವೆ’ ಎಂದು ಅರಣ್ಯ ಇಲಾಖೆ ನಿರ್ದೇಶಕ ನೈ ನೈ ಕ್ವಾ ಹೇಳಿದ್ದಾರೆ.

ಅಕ್ರಮ ಬೇಟೆಯಿಂದಾಗಿ ಕಾಡುಪ್ರಾಣಿಗಳು ದಕ್ಷಿಣ ಮ್ಯಾನ್ಮಾರ್‌ನಿಂದ ಉತ್ತರ ದಿಕ್ಕಿನತ್ತ ವಲಸೆ ಹೋಗುತ್ತಿರುವುದನ್ನು ಗಮನಿಸಿದ್ದು, ಅಕ್ರಮ ತಡೆಗೆ ಕಟ್ಟುನಿಟ್ಟಿನ ಕ್ರಮಗಳನ್ನು ಸರ್ಕಾರ ತೆಗೆದುಕೊಂಡಿದೆ.

ಅಂಕಿ–ಅಂಶ

‌* 850 ಕೆ.ಜಿ ತೂಕ – ಜಪ್ತಿ ಮಾಡಲಾದ ಚರ್ಮ, ಮೂಳೆ, ಕೊಂಬು ಅಗ್ನಿಗಾಹುತಿ

* ₹15 ಲಕ್ಷ ಕೋಟಿ – ವನ್ಯಜೀವಿ ಅಕ್ರಮ ವ್ಯವಹಾರದ ಅಂದಾಜು ಮೌಲ್ಯ

Tags: 

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !