ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಹ್ಯಾಕಾಶ ನಡಿಗೆ: ದಾಖಲೆ ಬರೆದ ಮಹಿಳಾ ಗಗನಯಾತ್ರಿಗಳು

Last Updated 18 ಅಕ್ಟೋಬರ್ 2019, 18:43 IST
ಅಕ್ಷರ ಗಾತ್ರ

ಕೇಪ್‌ ಕ್ಯಾನರೆವಲ್‌, ಫ್ಲಾರಿಡಾ, ಅಮೆರಿಕ (ಎಪಿ): ಅಂತರರಾಷ್ಟೀಯ ಬಾಹ್ಯಾಕಾಶ ನಿಲ್ದಾಣದಲ್ಲೇಉಳಿದಿರುವ ಇಬ್ಬರು ಮಹಿಳಾ ಗಗನಯಾತ್ರಿಕರು ಮೂರು ದಿನಗಳ ಬಾಹ್ಯಾಕಾಶ ನಡಿಗೆಯನ್ನು ಆರಂಭಿಸಿದ್ದಾರೆ.

ನಾಸಾ ಇದನ್ನು ಐತಿಹಾಸಿಕ (HERstory) ಎಂದು ಬಣ್ಣಿಸಿದೆ. ಗಗನಯಾತ್ರಿಗಳಾದ ಕ್ರಿಸ್ಟಿನಾ ಕೋಚ್ ಮತ್ತು ಜೆಸ್ಸಿಕಾ ಮೇರ್‌ ಅವರಿರುವ ತಂಡ, ನಿಲ್ದಾಣದ ದುರಸ್ತಿ ಕಾರ್ಯವನ್ನು ಶುಕ್ರವಾರ ಆರಂಭಿಸಿದ್ದು, ಬಾಹ್ಯಾಕಾಶ ನಡಿಗೆ ಕೈಗೊಂಡ ಮೊದಲ ಮಹಿಳಾ ತಂಡ ಎಂಬದಾಖಲೆಯನ್ನು ನಿರ್ಮಿಸಿದೆ.

ಕ್ರಿಸ್ಟಿನಾ ಕೋಚ್‌ ಅವರು 14ನೇ ಮಹಿಳಾ ಗಗನಯಾತ್ರಿ ಆಗಿದ್ದು, ಈಗಾಗಲೇ ಮೂರು ಬಾರಿ ನಡಿಗೆಯನ್ನು ಕೈಗೊಂಡಿದ್ದಾರೆ. ಜೆಸ್ಸಿಕಾ ಮೇರ್‌ 15ನೇ ಮಹಿಳೆಯಾಗಿದ್ದು, ಅವರಿಗೆ ಇದು ಹೊಸ ಅನುಭವವಾಗಿದೆ.

ಇತ್ತೀಚೆಗೆ ನಾಲ್ವರು ಬಾಹ್ಯಾಕಾಶಯಾನಿಗಳ ತಂಡ ಬ್ಯಾಟರಿಗಳನ್ನು ಜೋಡಿಸಿ ಭೂಮಿಗೆ ಮರಳಿತ್ತು. ವಾರದಲ್ಲೇ ಅವುಗಳು ಕೆಟ್ಟಿದ್ದರಿಂದಬದಲಾಯಿಸುವ ಜವಾಬ್ದಾರಿಯನ್ನು ಈ ಇಬ್ಬರು ಮಹಿಳಾ ಸದಸ್ಯರ ತಂಡಕ್ಕೆ ನೀಡಲಾಗಿದೆ.ಗಗನಯಾನಿಗಳ ಭಾವಚಿತ್ರವನ್ನು ನಾಸಾ ತನ್ನ ಟ್ವೀಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದು, ಇದಕ್ಕೆ ‘ಹರ್‌ಸ್ಟೋರಿ ಇನ್‌ ದ ಮೇಕಿಂಗ್‌’ ಎಂಬ ಶೀರ್ಷಿಕೆ ನೀಡಿದೆ.

***

1965:ರಷ್ಯಾದ ಗಗನಯಾತ್ರಿಯಿಂದ ಮೊದಲ ಬಾಹ್ಯಾಕಾಶ ನಡಿಗೆ

1984:ಮಹಿಳಾ ಗಗನಯಾತ್ರಿಯ (ರಷ್ಯಾ) ಮೊದಲ ನಡಿಗೆ

421:50ವರ್ಷಗಳಲ್ಲಿ ಇದುವರೆಗೂ ನಡೆದಿರುವ ಬಾಹ್ಯಾಕಾಶ ನಡಿಗೆಗಳು

213:ಬಾಹ್ಯಾಕಾಶ ನಡಿಗೆಯಲ್ಲಿ ಪಾಲ್ಗೊಂಡ ಪುರುಷರು

15 :ಇದುವರೆಗೂ ನಡಿಗೆಯಲ್ಲಿ ಪಾಲ್ಗೊಂಡ ಮಹಿಳೆಯರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT