ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಂದ್ರ, ಕ್ಷುದ್ರಗ್ರಹಗಳ ಅಧ್ಯಯನಕ್ಕೆ ತಂಡ

Last Updated 30 ಜೂನ್ 2019, 20:00 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಚಂದ್ರ, ಕ್ಷುದ್ರಗ್ರಹಗಳು ಮತ್ತು ಮಂಗಳ ಗ್ರಹದ ಉಪಗ್ರಹದ ಸುತ್ತಮುತ್ತಲಿನ ವಾತಾವರಣ ಕುರಿತು ಸಂಶೋಧನೆ ಕೈಗೊಳ್ಳಲು ಅಮೆರಿಕ ಬಾಹ್ಯಾಕಾಶ ಸಂಸ್ಥೆ ‘ನಾಸಾ’ಎಂಟು ಸಂಶೋಧನಾ ತಂಡಗಳನ್ನು ಆಯ್ಕೆ ಮಾಡಿದೆ.

ಸೌರಮಂಡಲ ಸಂಶೋಧನಾ ಸಂಸ್ಥೆ (ಎಸ್‌ಎಸ್‌ಇಆರ್‌ವಿಐ) ಈ ತಂಡಕ್ಕೆ ಐದು ವರ್ಷಗಳ ಕಾಲ ನೆರವು ನೀಡಲಿದೆ. ಈ ಸಂಶೋಧನೆಗೆ 1.05 ಕೋಟಿ ಡಾಲರ್‌(₹72.39ಕೋಟಿ) ವೆಚ್ಚವಾಗಲಿದೆ ಎಂದು ನಾಸಾ ತಿಳಿಸಿದೆ.

‘ಈ ಸಂಶೋಧನೆಯಿಂದ ಭವಿಷ್ಯದಲ್ಲಿ ಸೌರಮಂಡಲದ ಹೆಚ್ಚಿನ ಅಧ್ಯಯನಕ್ಕೆ ಪೂರಕವಾಗಲಿದೆ’ ಎಂದು ನಾಸಾದ ಗ್ರಹಗಳ ವಿಜ್ಞಾನ ವಿಭಾಗದ ನಿರ್ದೇಶಕ ಲೋರಿ ಗ್ಲೇಜ್‌ ತಿಳಿಸಿದ್ದಾರೆ.

ಪರಿಸರದಲ್ಲಿನ ವಿಕಿರಣಗಳು ಮತ್ತು ಅದಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಈ ತಂಡಗಳು ವಿಶ್ಲೇಷಣೆ ನಡೆಸಲಿವೆ ಎಂದು ನಾಸಾ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT