ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಠ್ಯಕ್ರಮ ಕಡಿತ: ಸಲಹೆಗೆ ಆಹ್ವಾನ

Last Updated 5 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ನವದೆಹಲಿ: ಒಂದನೇ ತರಗತಿಯಿಂದ 12ನೇ ತರಗತಿವರೆಗಿನ ಪಠ್ಯಕ್ರಮವನ್ನು ‘ಪರಿಷ್ಕರಿಸುವ’ ಬಗ್ಗೆ ಸಲಹೆ, ಸೂಚನೆಗಳನ್ನು ನೀಡುವಂತೆ ಶಿಕ್ಷಕರು, ಹೆತ್ತವರು, ವಿದ್ಯಾರ್ಥಿಗಳು ಮತ್ತು ಸಂಬಂಧಪಟ್ಟ ಇತರರನ್ನು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ (ಎಚ್‌ಆರ್‌ಡಿ) ಕೋರಿದೆ.

ಅಭಿಪ್ರಾಯಗಳನ್ನು ಏಪ್ರಿಲ್‌ 6ರೊಳಗೆ ಕಳುಹಿಸುವಂತೆ ಸೂಚಿಸಲಾಗಿದೆ. ಅಭಿಪ್ರಾಯ ಸಲ್ಲಿಕೆಗೆ ನಮೂನೆಯನ್ನು ಅಭಿವೃದ್ಧಿಪಡಿಸಲಾಗಿದೆ. ಆನ್‌ಲೈನ್‌ನಲ್ಲಿಯೂ ಸಲಹೆ ನೀಡುವುದಕ್ಕೆ ಅವಕಾಶ ಇದೆ. ಸಲಹೆ ಸಲ್ಲಿಸಲು ಆನ್‌ಲೈನ್‌ ವಿಳಾಸ ಹೀಗಿದೆ: http://164.100.78.75/DIGI.

ಸಲಹೆಗಳನ್ನು ನೀಡುವ ವ್ಯಕ್ತಿಗಳ ವೈಯಕ್ತಿಕ ವಿವರಗಳನ್ನು ಗೋಪ್ಯವಾಗಿಡಲಾಗುವುದು ಎಂದು ಎಚ್‌ಆರ್‌ಡಿ ತಿಳಿಸಿದೆ.

ಈಗಿನ ಪಠ್ಯಕ್ರಮವನ್ನು ಅರ್ಧಕ್ಕೆ ಇಳಿಸಿ ವಿದ್ಯಾರ್ಥಿಗಳ ಮೇಲಿನ ಹೊರೆಯನ್ನು ಕಡಿಮೆ ಮಾಡಬೇಕು ಎಂದು ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಪರಿಷತ್ತಿಗೆ (ಎನ್‌ಸಿಇಆರ್‌ಟಿ) ಎಚ್‌ಆರ್‌ಡಿ ಇತ್ತೀಚೆಗೆ ಸೂಚಿಸಿತ್ತು. ನೀತಿ ಶಿಕ್ಷಣ, ದೈಹಿಕ ಶಿಕ್ಷಣ, ಜೀವನ ಕೌಶಲ ಶಿಕ್ಷಣ, ಪ್ರಾಯೋಗಿಕ ಕಲಿಕೆಗೆ ಸಮಯ ದೊರಕುವಂತೆ ಹೊಸ ಪಠ್ಯಕ್ರಮ ಅಭಿವೃದ್ಧಿಪಡಿಸಬೇಕು ಎಂದು ಹೇಳಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT