ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

160 ಕೋಟಿಗೂ ಅಧಿಕ ಜನರ ಜೀವನೋಪಾಯಕ್ಕೆ ಕುತ್ತು: ಅಂತರರಾಷ್ಟ್ರೀಯ ಕಾರ್ಮಿಕ ಸಂಘಟನೆ

ಅಂತರರಾಷ್ಟ್ರೀಯ ಕಾರ್ಮಿಕ ಸಂಘಟನೆ ಅಂದಾಜು
Last Updated 30 ಏಪ್ರಿಲ್ 2020, 12:34 IST
ಅಕ್ಷರ ಗಾತ್ರ

ವಿಶ್ವಸಂಸ್ಥೆ (ಪಿಟಿಐ): ಕೋವಿಡ್‌–19 ಪಿಡುಗಿಗೆ ತತ್ತರಿಸದ ಕ್ಷೇತ್ರವೇ ಇಲ್ಲ ಎನ್ನುವಂತಾಗಿದೆ. ವಿಶ್ವದಲ್ಲಿನ ಅಸಂಘಟಿತ ವಲಯದ ಆರ್ಥಿಕ ಚಟುವಟಿಕೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ 160 ಕೋಟಿಗೂ ಅಧಿಕ ಜನರ ಜೀವನೋಪಾಯಕ್ಕೆ ಕುತ್ತು ಬಂದೊಗಲಿದೆ ಎಂದು ಅಂತರರಾಷ್ಟ್ರೀಯ ಕಾರ್ಮಿಕ ಸಂಘಟನೆ (ಐಎಲ್‌ಒ) ಅಂದಾಜಿಸಿದೆ.

ವಿಶ್ವದಾದ್ಯಂತ ಉದ್ಯಮಗಳು ತಮ್ಮ ಉತ್ಪಾದನಾ ಚಟುವಟಿಕೆಯನ್ನೇ ಕಡಿಮೆ ಮಾಡಿವೆ ಇಲ್ಲವೇ ಸ್ಥಗಿತಗೊಳಿಸಿವೆ. ಇದರಿಂದ ಅಸಂಘಟಿತ ವಲಯದ ಕಾರ್ಮಿಕರು ಕೂಡಲೇ ತಮ್ಮ ಉದ್ಯೋಗ ಕಳೆದುಕೊಳ್ಳುವ ಅಪಾಯ ಎದುರಿಸುತ್ತಿದ್ದಾರೆ ಎಂದು ಐಎಲ್‌ಒ ಬುಧವಾರ ಬಿಡುಗಡೆ ಮಾಡಿರುವ ‘ಕೋವಿಡ್‌–19 ಮತ್ತು ಔದ್ಯೋಗಿಕ ಜಗತ್ತು’ ಎಂಬ ಅಧ್ಯಯನ ವರದಿಯಲ್ಲಿ ಆತಂಕ ವ್ಯಕ್ತಪಡಿಸಲಾಗಿದೆ.

ವಿಶ್ವದಲ್ಲಿ 330 ಕೋಟಿ ಉದ್ಯೋಗಿಗಳು ಇದ್ದಾರೆ ಎಂದು ಅಂದಾಜಿಸಿರುವ ಐಎಲ್ಒ, ಈ ಪೈಕಿ 200 ಕೋಟಿ ಜನರು ಅಸಂಘಟಿತ ವಲಯದಲ್ಲಿ ದುಡಿಯುತ್ತಿದ್ದು ಅವರಿಗೆ ಯಾವುದೇ ಸೇವಾ ಭದ್ರತೆ ಎಂಬುದೇ ಇಲ್ಲ ಎಂದು ಹೇಳಿದೆ.

‘ಕೋವಿಡ್‌–19ನಿಂದಾಗಿ ಬಹುತೇಕ ಎಲ್ಲ ರಾಷ್ಟ್ರಗಳಲ್ಲಿ ಲಾಕ್‌ಡೌನ್‌ ಘೋಷಿಸಲಾಗಿದೆ. ಇದರಿಂದ ಕಾರ್ಮಿಕರ ವೇತನದಲ್ಲಿ ಶೇ 60ರಷ್ಟು ಇಳಿಕೆ ಕಂಡು ಬಂದಿದೆ. ಇನ್ನು, ಪ್ರದೇಶವಾರು ಅವಲೋಕಿಸಿದರೆ, ಆಫ್ರಿಕಾ ಮತ್ತು ಅಮೆರಿಕದ ಕಾರ್ಮಿಕ ವರ್ಗದ ಆದಾಯದಲ್ಲಿ ಶೇ 80ರಷ್ಟು, ಯುರೋಪ್‌ ಮತ್ತು ಮಧ್ಯ ಏಷ್ಯಾ– ಶೇ 70 ಹಾಗೂ ಏಷ್ಯಾ ಮತ್ತು ಪೆಸಿಫಿಕ್‌ ರಾಷ್ಟ್ರಗಳಲ್ಲಿನ ಕಾರ್ಮಿಕರ ವೇತನದಲ್ಲಿ ಶೇ 21.6ರಷ್ಟು ಇಳಿಕೆ ಕಂಡು ಬಂದಿದೆ ಎಂದೂ ವರದಿಯಲ್ಲಿ ವಿವರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT