ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೇಪಾಳ: ಪರಿಷ್ಕೃತ ಭೂಪಟಕ್ಕೆ ಅನುಮೋದನೆ, ಭಾರತದ ಭೂಭಾಗ ಒಳಗೊಂಡ ಹೊಸ ನಕ್ಷೆ

ಸಂಸತ್‌ ಅಧಿವೇಶನ ಆರಂಭ
Last Updated 9 ಜುಲೈ 2020, 2:47 IST
ಅಕ್ಷರ ಗಾತ್ರ

ಕಠ್ಮಂಡು: ದೇಶದ ಭೌಗೋಳಿಕ ಮತ್ತು ರಾಜಕೀಯ ಭೂಪಟವನ್ನು ಮಾರ್ಪಡಿಸುವ ಸಂವಿಧಾನ ತಿದ್ದುಪಡಿ ಮಸೂದೆಯನ್ನು ನೇಪಾಳ ಸಂಸತ್‌ನ ಕೆಳಮನೆಯಲ್ಲಿ ಸರ್ವಾನುಮತದಿಂದ ಶನಿವಾರ ಅಂಗೀಕರಿಸಲಾಯಿತು.

ಭಾರತ ಜತೆಗಿನ ವಿವಾದಿತ ಗಡಿಯಲ್ಲಿರುವ ಲಿಪುಲೇಖ್‌, ಕಾಲಾಪಾನಿ ಮತ್ತು ಲಿಂಪಿಯಾಧೂರಾಗಳನ್ನು ತನ್ನದೆಂದು ನೇಪಾಳ ಪ್ರತಿಪಾದಿಸುತ್ತಿದೆ. ಮಾರ್ಪಡಿಸಿರುವ ಭೂಪಟವು ಈ ಪ್ರದೇಶಗಳನ್ನು ಒಳಗೊಂಡಿದೆ.

ನೇಪಾಳಿ ಕಾಂಗ್ರೆಸ್‌, ರಾಷ್ಡ್ರೀಯ ಜನತಾ ಪಾರ್ಟಿ–ನೇಪಾಳ (ಆರ್‌ಜೆಪಿ–ಎನ್‌), ರಾಷ್ಟ್ರೀಯ ಪ್ರಜಾತಂತ್ರ ಪಾರ್ಟಿ (ಆರ್‌ಪಿಪಿ) ಸೇರಿದಂತೆ ಪ್ರಮುಖ ವಿರೋಧ ಪಕ್ಷಗಳು ತಿದ್ದುಪಡಿ ಪರ ಮತ ಚಲಾಯಿಸಿದವು.

ಮಾರ್ಪಡಿಸಿರುವ ಭೂಪಟವನ್ನು ಒಳಗೊಂಡ ರಾಷ್ಟ್ರೀಯ ಲಾಂಛನವನ್ನು ಮರುವಿನ್ಯಾಸಗೊಳಿಸಲು ಸಹ ಈ ತಿದ್ದುಪಡಿ ಮಸೂದೆಯಿಂದ ಸಾಧ್ಯವಾಗಲಿದೆ ಎಂದು ಮೂಲಗಳು ತಿಳಿಸಿವೆ.

ಅನುಮೋದಿತ ಮಸೂದೆಯನ್ನು ಈಗ ನ್ಯಾಷನಲ್‌ ಅಸೆಂಬ್ಲಿಗೆ ಕಳುಹಿಸಲಾಗುತ್ತದೆ. ಮತ್ತೆ ತಿದ್ದುಪಡಿಗಳು ಅಗತ್ಯ ಎನಿಸಿದರೆ, ಅವುಗಳನ್ನು ಸಲ್ಲಿಸಲು 72 ಗಂಟೆಗಳ ಕಾಲಾವಕಾಶ ನೀಡಲಾಗುತ್ತದೆ.

ಅಲ್ಲಿಯೂ ಅಂಗೀಕರಿಸಿದ ಮಸೂದೆಯನ್ನು ಅಂಕಿತಕ್ಕಾಗಿ ರಾಷ್ಟ್ರಪತಿ ಅವರಿಗೆ ಕಳುಹಿಸಲಾಗುತ್ತದೆ. ನಂತರ ಈ ತಿದ್ದುಪಡಿಗಳನ್ನು ಸಂವಿಧಾನದಲ್ಲಿ ಅಳವಡಿಸಲಾಗುತ್ತದೆ.

ನ್ಯಾಷನಲ್‌ ಅಸೆಂಬ್ಲಿಯ ಒಟ್ಟು ಸದಸ್ಯ ಬಲ 275. ತಿದ್ದುಪಡಿ ಮಸೂದೆ ಅಂಗೀಕಾರಕ್ಕೆ ಮೂರನೇ ಒಂದರಷ್ಟು ಮತಗಳ ಅಗತ್ಯ ಇದೆ. ಆಡಳಿತಾರೂಢ ನೇಪಾಳ ಕಮ್ಯುನಿಸ್ಟ್‌ ಪಾರ್ಟಿ ಅಗತ್ಯ ಸಂಖ್ಯಾಬಲ ಹೊಂದಿದೆ.

ವಿರೋಧ: ಕಳೆದ ತಿಂಗಳು ಸಚಿವ ಸಂಪುಟ ಅನುಮೋದನೆ ಮಾಡಿದ್ದ ಮಾರ್ಪಡಿಸಿದ ಭೂಪಟವನ್ನು ನೇಪಾಳ ಬಿಡುಗಡೆ ಮಾಡಿದಾಗ, ಅದಕ್ಕೆ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು.

‘ಇಂತಹ ಕ್ರಮಗಳ ಮೂಲಕ ತನ್ನ ಭೂಭಾಗವನ್ನು ವಿಸ್ತರಿಸುವುದನ್ನು ನೇಪಾಳ ನಿಲ್ಲಿಸಬೇಕು’ ಎಂದು ಕಟುವಾದ ಎಚ್ಚರಿಕೆಯನ್ನೂ ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT