ಶನಿವಾರ, ಮೇ 30, 2020
27 °C

ರೋಗ ನಿರೋಧಕ ಪತ್ತೆ ಹಚ್ಚುವ ಮಾದರಿ ಅಭಿವೃದ್ಧಿ

ಪಿಟಿಐ Updated:

ಅಕ್ಷರ ಗಾತ್ರ : | |

ಬೀಜಿಂಗ್‌ : ಕೋವಿಡ್‌–19ನಿಂದ ಗುಣಮುಖರಾದ ರೋಗಿಗಳ ರಕ್ತದಲ್ಲಿರುವ ಹಲವು ರೋಗನಿರೋಧಕ ಕಣಗಳನ್ನು ತಕ್ಷಣವೇ ಪತ್ತೆ ಹಚ್ಚುವ ಮಾದರಿಯನ್ನು ಸಂಶೋಧಕರು ಅಭಿವೃದ್ಧಿಪಡಿಸಿದ್ದಾರೆ. 

ವಿಜ್ಞಾನಿಗಳ ಪ್ರಕಾರ ಈ ರೋಗನಿರೋಧಕ ಕಣಗಳನ್ನು ಬಳಸಿ, ಎಬೊಲಾ, ಏಡ್ಸ್‌ ಮತ್ತು ಎಂಇಆರ್‌ಎಸ್‌ನಂಥ ರೋಗದ ಚಿಕಿತ್ಸೆಗೆ ಯಶಸ್ವಿಯಾಗಿ ಬಳಸಬಹುದು ಎಂದು ಪೀಕಿಂಗ್‌ ವಿಶ್ವವಿದ್ಯಾಲಯದ ಅಡ್ವಾನ್ಸ್‌ಡ್‌ ಇನ್ನೊವೇಷನ್‌ ಸೆಂಟರ್‌ ಫಾರ್‌ ಜಿನೊಮಿಕ್ಸ್‌ನ ನಿರ್ದೇಶಕ ಸನ್ನಿ ಕ್ಸಿ ತಿಳಿಸಿದರು. 

‘ಸೆಲ್‌’ ಹೆಸರಿನ ನಿಯತಕಾಲಿಕದಲ್ಲಿ ಈ ಕುರಿತು ಅಧ್ಯಯನ ವರದಿ ಪ್ರಕಟವಾಗಿದೆ. ಕೊರೊನಾ ಸೋಂಕಿನಿಂದ ಗುಣಮುಖರಾಗುತ್ತಿರುವ ರೋಗಿಯ ಪ್ಲಾಸ್ಮಾದಲ್ಲಿರುವ ರೋಗನಿರೋಧಕ ಕಣಗಳಿಂದ ಕೋವಿಡ್‌–19 ನಿಂದ ಬಳಲುತ್ತಿರುವ ರೋಗಿಯ ಆರೋಗ್ಯ ಸುಧಾರಿಸಿರುವುದು ಅಧ್ಯಯನದಲ್ಲಿ ಗೊತ್ತಾಗಿದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು