ಭಾನುವಾರ, ಜುಲೈ 25, 2021
22 °C

ಕೊರೊನಾ ವೈರಸ್‌ ಪ್ರಭಾವ ಕಡಿಮೆಯಾಗುತ್ತಿದೆ: ಇಟಲಿ ವೈದ್ಯ ಹೇಳಿಕೆ

ರಾಯಿಟರ್ಸ್ Updated:

ಅಕ್ಷರ ಗಾತ್ರ : | |

coronavirus

ರೋಮ್: ಕೊರೊನಾ ವೈರಸ್ ಪ್ರಭಾವ ಈಗ ಕಡಿಮೆಯಾಗುತ್ತಿದ್ದು, ಅದರಿಂದ ಆಗುವ ಹಾನಿಯ ತೀವ್ರತೆ ಕಡಿಮೆಯಾಗಿದೆ ಎಂದು ಇಟಲಿಯ ಹಿರಿಯ ವೈದ್ಯರೊಬ್ಬರು ಭಾನುವಾರ ತಿಳಿಸಿದ್ದಾರೆ.

ವಾಸ್ತವದಲ್ಲಿ ಹೇಳುವುದಾದರೆ ಪ್ರಾಯೋಗಿಕವಾಗಿ ಇಟಲಿಯಲ್ಲಿ ಈಗ ಕೊರೊನಾ ವೈರಸ್ ಅಸ್ಥಿತ್ವದಲ್ಲೇ ಇಲ್ಲ ಎಂದು ಇಟಲಿಯಲ್ಲಿನ ಮಿಲನ್‌ನಲ್ಲಿರುವ ಸ್ಯಾನ್ ರಾಫೆಲ್ ಆಸ್ಪತ್ರೆ ಮುಖ್ಯಸ್ಥ ಆಲ್ಬರ್ಟೊ ಜಾಂಗ್ರಿಲ್ಲೊ ಹೇಳಿದ್ದಾರೆ. ಕಳೆದ ಹತ್ತು ದಿನಗಳಲ್ಲಿ ನಡೆಸಲಾದ ಪರೀಕ್ಷೆಗಳು ಮತ್ತು ಒಂದು ಅಥವಾ ಎರಡು ತಿಂಗಳ ಹಿಂದೆ ನಡೆಸಿದ ಪರೀಕ್ಷೆಗಳನ್ನು ಹೋಲಿಸಿದಾಗ ಈ ವಿಷಯ ತಿಳಿದುಬಂದಿದೆ ಎಂದು ಅವರು ತಿಳಿಸಿದ್ದಾರೆ.

ಕೊರೊನಾದಿಂದಾಗಿ ಅತಿ ಹೆಚ್ಚು ಸಾವು ಸಂಭವಿಸಿದ ವಿಶ್ವದ ಮೂರನೇ ದೇಶವಾಗಿದೆ ಇಟಲಿ. ಫೆಬ್ರುವರಿ 21ರ ಬಳಿಕ ಅಲ್ಲಿ ಈವರೆಗೆ 33,415 ಜನ ಮೃತಪಟ್ಟಿದ್ದಾರೆ. 2.33 ಲಕ್ಷಕ್ಕೂ ಹೆಚ್ಚು ಜನರಿಗೆ ಸೋಂಕು ತಗುಲಿದೆ. ಆದಾಗ್ಯೂ ಸೋಂಕು ಹರಡುವಿಕೆ ಮತ್ತು ಸಾವು ಸಂಭವಿಸುತ್ತಿರುವ ಪ್ರಮಾಣ ಮೇ ತಿಂಗಳಲ್ಲಿ ಕಡಿಮೆಯಾಗುತ್ತಾ ಬಂದಿದೆ.

ಇದನ್ನೂ ಓದಿ: 

ಸೋಂಕಿನ ಎರಡನೇ ಅಲೆಯ ಬಗ್ಗೆ ತಜ್ಞರು ತುಂಬಾ ಎಚ್ಚರವಹಿಸಿದ್ದಾರೆ. ಹೊಸ ವಾಸ್ತವವನ್ನು ರಾಜಕಾರಣಿಗಳು ಪರಿಗಣನೆಗೆ ತೆಗೆದುಕೊಳ್ಳುವ ಅಗತ್ಯವಿದೆ. ದೇಶವನ್ನು ಸಹಜಸ್ಥಿತಿಗೆ ಮರಳಿ ತರಬೇಕಿದೆ ಎಂದು ಅವರು ಹೇಳಿದ್ದಾರೆ.

ಕೊರೊನಾ ವಿರುದ್ಧ ಗೆಲುವು ಸಾಧಿಸಲಾಗಿದೆ ಎಂದು ಈಗಲೇ ಘೋಷಿಸುವುದು ಬಹಳ ಆತುರದ ನಿರ್ಧಾರವಾಗಲಿದೆ ಎಂದು ಅಲ್ಲಿನ ಸರಕಾರ ಈಚೆಗೆ ಹೇಳಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು