ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತತ್ತರಿಸಿದ ನ್ಯೂಯಾರ್ಕ್‌: ಆತಂಕದ ಛಾಯೆ

Last Updated 28 ಮಾರ್ಚ್ 2020, 3:28 IST
ಅಕ್ಷರ ಗಾತ್ರ

ನ್ಯೂಯಾರ್ಕ್‌ (ಎಎಫ್‌ಪಿ): ಇಲ್ಲಿನ ಆಸ್ಪತ್ರೆಗಳು ಈಗ ರೋಗಿಗಳಿಂದ ಭರ್ತಿಯಾಗುತ್ತಿವೆ. ರೋಗಿಗಳನ್ನು ದಾಖಲಿಸಿಕೊಳ್ಳಲು ಆಸ್ಪತ್ರೆಯಲ್ಲಿ ಹಾಸಿಗೆಗಳು ಸಾಲುತ್ತಿಲ್ಲ.ಆಸ್ಪತ್ರೆಗಳ ಸಿಬ್ಬಂದಿ ಹೆಚ್ಚುವರಿ ಪಾಳಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಸ್ತುತ ಪರಿಸ್ಥಿತಿಯಿಂದಆತಂಕದ ಛಾಯೆ ಮೂಡಿದೆ.

ಅಮೆರಿಕದಲ್ಲಿನ್ಯೂಯಾರ್ಕ್‌ ನಗರದಲ್ಲೇ ಅತಿ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ. ಇದುವರೆಗೆ 385 ಸೋಂಕಿತರು ಸಾವಿಗೀಡಾಗಿದ್ದಾರೆ. ಇವರಲ್ಲಿ ಬಹುತೇಕ ರೋಗಿಗಳು ವೃದ್ಧರು ಮತ್ತು ಈಗಾಗಲೇ ವಿವಿಧ ಕಾಯಿಲೆಗಳಿಂದ ಬಳಲುತ್ತಿದ್ದವರೇ ಸೇರಿದ್ದಾರೆ.

‘ಇತ್ತೀಚೆಗೆ ಎಲ್ಲ ವಯೋಮಾನದವರು ಸೋಂಕಿಗೆ ಒಳಗಾಗುತ್ತಿದ್ದಾರೆ. ಹೊರಗೆ ಹೋಗಬೇಡಿ, ತಿರುಗಾಡಬೇಡಿ ಎನ್ನುವ ಸಲಹೆಯನ್ನು ಸಾರ್ವಜನಿಕರು ಕೇಳಲಿಲ್ಲ. ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಿಲ್ಲ. 30 ವರ್ಷದ ಯುವಕರು ಸಾವಿಗೀಡಾಗುವುದನ್ನು ನೋಡಲು ಕಷ್ಟವಾಗುತ್ತಿದೆ’ ಎಂದು ಇಲ್ಲಿನ ವೈದ್ಯಕೀಯ ಕೇಂದ್ರದ ಸಿಬ್ಬಂದಿ ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಾರೆ.

‘ನಗರದ ಹಲವು ಆಸ್ಪತ್ರೆಗಳಲ್ಲಿ ವೆಂಟಿಲೇಟರ್‌ಗಳಕೊರತೆಯಾಗುತ್ತಿದೆ. ವೈದ್ಯರು ಮತ್ತು ಸಿಬ್ಬಂದಿಗೂ ಕೆಲಸದ ಒತ್ತಡ ಹೆಚ್ಚಾಗುತ್ತಿದೆ’ ಎಂದು ವಿವರಿಸಿದ್ದಾರೆ.

‘ಮುಂದಿನ ಕೆಲವು ತಿಂಗಳು ಒತ್ತಡದಿಂದ ಕೂಡಿರುತ್ತವೆ. ನಮ್ಮ ಆರೊಗ್ಯ ವ್ಯವಸ್ಥೆಯ ಮೇಲೆಯೂ ಅಪಾರ ಪರಿಣಾಮ ಬೀರಿದೆ’ ಎಂದುನ್ಯೂಯಾರ್ಕ್‌ ನಗರದ ಮೇಯರ್‌ ಬಿಲ್‌ ಡೆ ಬ್ಲಾಸಿಯೊ ಟ್ವೀಟ್‌ ಮಾಡಿದ್ದಾರೆ.

‘ನಮಗೆ ಪ್ರತಿ ದಿನ ಸುಮಾರು ಆರು ಸಾವಿರ ಕರೆಗಳು ಬರುತ್ತಿವೆ.ನ್ಯೂಯಾರ್ಕ್ನಗರದಲ್ಲಿ 2001ರ ಸೆಪ್ಟೆಂಬರ್‌ 11ರಂಂದು ಭಯೋತ್ಪಾದಕರು ದಾಳಿ ನಡೆಸಿದಾಗಲೂ ಇಷ್ಟೊಂದು ಕರೆಗಳು ಬಂದಿರಲಿಲ್ಲ’ ಎಂದು ವೈದ್ಯಕೀಯ ಸೇವೆಗಳ ತುರ್ತು ಸೇವೆ ಘಟಕದಲ್ಲಿ ಕಾರ್ಯನಿರ್ವಹಿಸುವ ಅಂಟೋಲಿ ಅಲ್ಮೊಜೆರಿಯಾ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT