ಶನಿವಾರ, ಅಕ್ಟೋಬರ್ 19, 2019
22 °C

ನೀರವ್‌ಗೆ ಬಂಧನ ಅವಧಿ ವಿಸ್ತರಣೆ

Published:
Updated:
Prajavani

ಲಂಡನ್‌: ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ ₹13 ಸಾವಿರ ಕೋಟಿ ವಂಚಿಸಿದ ಆರೋಪ ಹೊತ್ತು ಭಾರತದಿಂದ ಪರಾರಿಯಾಗಿರುವ ವಜ್ರದ ವ್ಯಾಪಾರಿ ನೀರವ್‌ ಮೋದಿಗೆ ವಿಧಿಸಿದ್ದ ನ್ಯಾಯಾಂಗ ಬಂಧನವನ್ನು ಅ.17ರವರೆಗೆ ವಿಸ್ತರಿಸಲಾಗಿದೆ. 

ಲಂಡನ್‌ನ ಜೈಲಿನಿಂದ ವಿಡಿಯೊ ಕಾನ್ಫರೆನ್ಸ್ ಮೂಲಕ ವೆಸ್ಟ್‌ ಮಿನ್‌ಸ್ಟರ್‌ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದ ಕಲಾಪಕ್ಕೆ ಮೋದಿ ಹಾಜರಾದಾಗ, ನ್ಯಾಯಾಲಯ ಬಂಧನ ಅವಧಿ ವಿಸ್ತರಿಸಿತು.  2020ರ ಮೇ 11ರಿಂದ15ರ ನಡುವೆ ಈ ಪ್ರಕರಣ  ವಿಚಾರಣೆ ಆರಂಭವಾಗುವ ನಿರೀಕ್ಷೆ ಇದೆ. ಲಂಡನ್‌ನಲ್ಲಿ ಕೈದಿಗಳಿಂದ ಕಿಕ್ಕಿರಿದಿರುವ ವಾಂಡ್ಸ್‌ವರ್ತ್‌ ಜೈಲಿನಲ್ಲಿ ನೀರವ್‌ ಮೋದಿಯನ್ನು ಇರಿಸಲಾಗಿದೆ. 

Post Comments (+)