ಮಂಗಳವಾರ, ಸೆಪ್ಟೆಂಬರ್ 24, 2019
29 °C

ಅಣ್ವಸ್ತ್ರ ನೀತಿಯಲ್ಲಿ ಬದಲಾವಣೆ ಇಲ್ಲ: ಪಾಕ್‌

Published:
Updated:

ಇಸ್ಲಾಮಾಬಾದ್‌ (ಪಿಟಿಐ): ಅಣ್ವಸ್ತ್ರಗಳನ್ನು ಹೊಂದಿರುವ ಎರಡು ರಾಷ್ಟ್ರಗಳ ನಡುವೆ ಕಾಶ್ಮೀರ ವಿಷಯದ ಬಗ್ಗೆ ಉದ್ವಿಗ್ನ ವಾತಾವರಣ ಹೆಚ್ಚುತ್ತಿರುವ ಮಧ್ಯೆ, ತಮ್ಮ ದೇಶವು ಎಂದಿಗೂ ಭಾರತದೊಂದಿಗೆ ಯುದ್ಧ ಪ್ರಾರಂಭಿಸುವುದಿಲ್ಲ ಎಂದು ಪ್ರಧಾನಿ ಇಮ್ರಾನ್‌ ಖಾನ್‌ ಹೇಳಿಕೆ ನೀಡಿದ್ದ ಬೆನ್ನಲ್ಲೇ, ಪಾಕಿಸ್ತಾನದ ಅಣ್ವಸ್ತ್ರ ನೀತಿಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ವಿದೇಶಾಂಗ ಕಚೇರಿ ಹೇಳಿದೆ.

ಲಾಹೋರ್‌ನಲ್ಲಿ ಮಾತನಾಡಿದ ಇಮ್ರಾನ್‌, ‘ಭಾರತ, ಪಾಕಿಸ್ತಾನ ಎರಡೂ ರಾಷ್ಟ್ರಗಳು ಅಣ್ವಸ್ತ್ರ ಹೊಂದಿವೆ. ಉದ್ವಿಗ್ನ ಪರಿಸ್ಥಿತಿ ಬಿಗಡಾಯಿಸಿದರೆ ವಿಶ್ವವು ಅಪಾಯ ಎದುರಿಸಬೇಕಾಗುತ್ತದೆ. ಆದರೆ, ಯುದ್ಧವನ್ನು ನಾವು ಮೊದಲು ಪ್ರಾರಂಭಿಸುವುದಿಲ್ಲ’ ಎಂದರು.

Post Comments (+)