ಸೋಮವಾರ, ಅಕ್ಟೋಬರ್ 21, 2019
23 °C
ಸಿಪಿಸಿ 70ನೇ ವರ್ಷಾಚರಣೆ

ಚೀನಾ ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಷಿ ಜಿನ್‌‌ಪಿಂಗ್

Published:
Updated:
Prajavani

ಬೀಜಿಂಗ್: ‘ಚೀನಾ ಹಾಗೂ ಚೀನಾದ ಜನರು ಮುನ್ನಡೆ ಸಾಧಿಸುವುದನ್ನು ತಡೆಯಲು ಯಾವ ಶಕ್ತಿಯಿಂದಲೂ ಸಾಧ್ಯವಿಲ್ಲ’ ಎಂದು ಅಧ್ಯಕ್ಷ ಷಿ ಜಿನ್‌ಪಿಂಗ್ ಅವರು ಮಂಗಳವಾರ ಹೇಳಿದ್ದಾರೆ.

ಕಮ್ಯುನಿಸ್ಟ್ ಪಕ್ಷ ಸ್ಥಾಪನೆಯ 70ನೇ ವರ್ಷಾಚರಣೆಗಾಗಿ ಆಯೋಜಿಸಿದ್ದ ಬೃಹತ್ ಶಕ್ತಿಪ್ರದರ್ಶನ ಉದ್ದೇಶಿಸಿ ಮಾತನಾಡಿದ ಅವರು, ‘ಭವಿಷ್ಯದ ಪೀಳಿಗೆಗಾಗಿ ಸಹಭಾಗಿತ್ವ ಹೊಂದಲು, ಎಲ್ಲಾ ರಾಷ್ಟ್ರಗಳ ಜನರ ಜತೆ ಕಾರ್ಯನಿರ್ವಹಿಸುವುದನ್ನು ನಾವು ಮುಂದುವರಿಸುತ್ತೇವೆ’ ಎಂದು ಹೇಳಿದರು.

‘ಚೀನಾದ ಸಾರ್ವಭೌಮತ್ವ, ಭದ್ರತೆ ಹಾಗೂ ಅಭಿವೃದ್ಧಿ ಹಿತಾಸಕ್ತಿಗಳನ್ನು ರಕ್ಷಿಸುವ ಮತ್ತು ಜಾಗತಿಕ ಶಾಂತಿ ಕಾಪಾಡುವ ತನ್ನ ಕಾರ್ಯೋದ್ದೇಶಗಳಿಗೆ ಪೀಪಲ್ಸ್ ಲಿಬರೇಷನ್ ಆರ್ಮಿ (ಪಿಎಲ್‌ಎ) ಹಾಗೂ ಪೀಪಲ್ಸ್ ಆರ್ಮ್ಡ್‌ ಪೊಲೀಸ್ ಫೋರ್ಸ್ ಸದಾ ಬದ್ಧವಾಗಿರಬೇಕು’ ಎಂದು ಷಿ ತಿಳಿಸಿದ್ದಾರೆ.

ಕಮ್ಯುನಿಸ್ಟ್ ಪಾರ್ಟಿ ಆಫ್ ಚೀನಾ (ಸಿಪಿಸಿ) ನಾಯಕತ್ವದ ಅಡಿಯಲ್ಲಿ ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ ಸ್ಥಾಪನೆಯಾಗಿದ್ದರಿಂದ ‘ಚೀನಾದ ಶೋಚನೀಯ ಹಣೆಬರಹ’ ಬದಲಾಯಿತು ಎಂದು ಅವರು ಹೇಳಿದರು.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

Post Comments (+)