ಮಂಗಳವಾರ, ನವೆಂಬರ್ 19, 2019
23 °C
ಇಮ್ರಾನ್‌ಖಾನ್‌ ಪ್ರಧಾನಿ ಹುದ್ದೆ ತ್ಯಜಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ ಮೌಲ್ವಿಗಳ ವಿರುದ್ಧ ಕಿಡಿ

ಅನಿಶ್ಚಿತತೆಗೆ ಅವಕಾಶ ಇಲ್ಲ: ಪಾಕ್‌ ಸೇನೆ

Published:
Updated:

ಇಸ್ಲಾಮಾಬಾದ್: ‘ದೇಶದಲ್ಲಿ ಅನಿಶ್ಚಿತ ಪರಿಸ್ಥಿತಿ ಸೃಷ್ಟಿಸಲು ಯಾರಿಗೂ ಅವಕಾಶ ನೀಡುವುದಿಲ್ಲ’ ಎಂದು ಪಾಕಿಸ್ತಾನ ಸೇನೆ ಶನಿವಾರ ಎಚ್ಚರಿಕೆ ನೀಡಿದೆ.

ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಲು ಇಮ್ರಾನ್‌ ಖಾನ್‌ ಅವರಿಗೆ ಮೌಲ್ವಿ, ರಾಜಕಾರಣಿ ಮೌಲಾನಾ ಫಜ್ಲುರ್ ರೆಹಮಾನ್‌ ಅವರು ಎರಡು ದಿನಗಳ ಗಡುವು ವಿಧಿಸಿದ ಹಿಂದೆಯೇ ಈ ಎಚ್ಚರಿಕೆಯ ಮಾತು ಹೊರಬಿದ್ದಿದೆ.

‘ಮೌಲಾನಾ ಫಜ್ಲುರ್ ರೆಹಮಾನ್‌ ಅವರು ಹಿರಿಯ ರಾಜಕಾರಣಿ. ಅವರು ಯಾವ ಸಂಸ್ಥೆ ಕುರಿತು ಮಾತನಾಡಿದ್ದಾರೆ ಎಂದು ಸ್ಪಷ್ಟಪಡಿಸಬೇಕು. ಪಾಕಿಸ್ತಾನ ಸೇನೆ ಎಂದಿಗೂ ಪ್ರಜಾಪ್ರಭುತ್ವ ಮಾರ್ಗದಲ್ಲಿ ಆಯ್ಕೆಯಾದ ಸರ್ಕಾರವನ್ನು ಬೆಂಬಲಿಸಲಿದೆ’ ಎಂದು ಪಾಕಿಸ್ತಾನ ಸೇನಾ ವಕ್ತಾರ ಮೇಜರ್‌ ಜನರಲ್‌ ಆಸೀಫ್ ಗಫೂರ್‌ ಪ್ರತಿಕ್ರಿಯಿಸಿದರು.

ಪ್ರತಿಕ್ರಿಯಿಸಿ (+)