ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಥಿಯೊಪಿಯಾ ಪ್ರಧಾನಿ ಅಬಿ ಅಹಮದ್ ಅಲಿಗೆ ನೊಬೆಲ್‌ ಶಾಂತಿ ಪ್ರಶಸ್ತಿ

Last Updated 11 ಅಕ್ಟೋಬರ್ 2019, 10:23 IST
ಅಕ್ಷರ ಗಾತ್ರ

ಸ್ಟಾಕ್‌ಹೋಮ್‌:ಅಂತರ ರಾಷ್ಟ್ರೀಯ ಸಹಕಾರ ಮತ್ತು ಶಾಂತಿ ಸುವ್ಯವಸ್ಥೆಗೆನೀಡಿದ ಕೊಡುಗೆಗಾಗಿ ಇಥಿಯೊಪಿಯಾದ ಪ್ರಧಾನಿ ಅಬಿ ಅಹಮದ್‌ ಅಲಿ ಅವರಿಗೆ ನೊಬೆಲ್‌ ಶಾಂತಿ ಪ್ರಶಸ್ತಿ ನೀಡಲಾಗಿದೆ.

ವಾರ್ಷಿಕ ನೊಬೆಲ್‌ ಶಾಂತಿ ಪ್ರಶಸ್ತಿಯನ್ನು ಶುಕ್ರವಾರ ಪ್ರಕಟಿಸಲಾಗಿದೆ.

ಅಬಿ ಅಹಮದ್‌ ಅಲಿ ಅವರು ಪೂರ್ವ ಆಫ್ರಿಕಾದ ಉತ್ತರದಲ್ಲಿನ ಕೆಂಪು ಸಮುದ್ರ ತೀರಕ್ಕೆ ಹೊಂದಿಕೊಂಡಿರುವ ಎರಿಟ್ರಿಯ ದೇಶದ ಗಡಿ ಸಂಘರ್ಷವನ್ನು ಪರಿಹರಿಸುವಲ್ಲಿ ನಿರ್ಣಾಯಕ ಪಾತ್ರವಹಿಸಿದ್ದರು.

2019ರ ಶಾಂತಿ ಪುರಸ್ಕಾರವನ್ನು ಇಥಿಯೊಪಿಯಾದಲ್ಲಿ ಹಾಗೂ ಪೂರ್ವ ಮತ್ತು ಈಶಾನ್ಯ ಆಫ್ರಿಕಾದ ದೇಶಗಳಲ್ಲಿ ಶಾಂತಿ ಸಾಮರಸ್ಯಕ್ಕಾಗಿ ಕಾರ್ಯ ನಿರ್ವಹಿಸದ ಎಲ್ಲಾ ಪಾಲುದಾರರನ್ನು ಗುರುತಿಸಲು ಉದ್ದೇಶಿಸಲಾಗಿದೆ.

ನೊಬೆಲ್‌ ಶಾಂತಿ ಪುರಸ್ಕೃತರಾದಅಬಿ ಅಹಮದ್ ಅಲಿ ಅವರು ಎರಿಟ್ರಿಯಾದ ಅಧ್ಯಕ್ಷ ಇಸಾಯಸ್‌ ಅಫ್ವೆರ್ಕಿ ಅವರ ನಿಟಕ ಸಹಕಾರದೊಂದಿಗೆ ದೇಶಗಳ ಮಧ್ಯೆ ಇದ್ದ‘ಯುದ್ಧವೂ ಇಲ್ಲ, ಶಾಂತಿಯೂ ಇಲ್ಲ’ದ ಬಿಕ್ಕಟ್ಟಿನ ಪರಿಸ್ಥಿತಿಯನ್ನು ನಿವಾರಿಸಲು ಶಾಂತಿ ಒಪ್ಪಂದದ ತತ್ವಗಳನ್ನು ತ್ವರಿತವಾಗಿ ರೂಪಿಸಿದ್ದರು.

* ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT