ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈಕೊಟ್ಟ ಮತಯಂತ್ರ; ಮತದಾರರಿಗೆ ಅಡಚಣೆ

Last Updated 12 ಮೇ 2018, 19:30 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಜಿಲ್ಲೆಯ ಐದಾರು ಕಡೆಗಳಲ್ಲಿ ಮತಯಂತ್ರ ಸಮಸ್ಯೆಯಿಂದಾಗಿ ಮತದಾನಕ್ಕೆ ತೊಂದರೆಯಾಯಿತು. ಮತ ಚಲಾವಣೆ ಪ್ರಕ್ರಿಯೆ ವಿಳಂಬ
ವಾಗಿದ್ದು ಬಿಟ್ಟರೆ, ಎಲ್ಲ ಮತಗಟ್ಟೆಗಳಲ್ಲಿ ವ್ಯವಸ್ಥಿತವಾಗಿ, ಶಾಂತಿಯುತವಾಗಿ ಮತದಾನ ನಡೆದಿದೆ.

ನಗರದ ಉಪ್ಪಳ್ಳಿಯ (ಶಾಂತಿನಗರ) ಮತಗಟ್ಟೆ ಸಂಖ್ಯೆ 166ರಲ್ಲಿ ಮತದಾರನೊಬ್ಬ ಮತಯಂತ್ರದ (ಇವಿಎಂ) ಬಟನ್‌ ಒತ್ತಿದಾಗ ಅದು ಜಾಮ್‌ ಆಗಿ, ತೊಡಕಾಯಿತು. ಮತದಾನಕ್ಕೆ ಸಾಲಿನಲ್ಲಿ ನಿಂತಿದ್ದವರು ಸುಮಾರು ಮುಕ್ಕಾಲು ಗಂಟೆ ಕಾಯುವಂತಾಯಿತು. ನಿವಾಸಿಗಳು, ಪಕ್ಷಗಳ ಕಾರ್ಯಕರ್ತರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಸೆಕ್ಟರ್‌ ಅಧಿಕಾರಿ ವೆಂಕಟರಾಮು ‘ಪ್ರಜಾವಾಣಿ’ಯೊಂದಿಗೆ ಮಾತನಾಡಿ, ‘ಮತಯಂತ್ರದ ಬಟನ್‌ ಜಾಮ್‌ ಆಗಿ ಸಮಸ್ಯೆಯಾಗಿತ್ತು. ನಂತರ, ಬೇರೆ ಯಂತ್ರ
ವನ್ನು ಅಳವಡಿಸಿ ಮತದಾನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಪ್ರಕ್ರಿಯೆ ಶಾಂತಿಯುತವಾಗಿ ನಡೆದಿದೆ’ ಎಂದು ತಿಳಿಸಿದರು.

ಕಾದು ಕುಳಿತ ಮೋಟಮ್ಮ: ಮೂಡಿಗೆರೆಯ ಬಾಲಕರ ಸರ್ಕಾರಿ ಪಿಯು ಕಾಲೇಜು ಮತಗಟ್ಟೆಯಲ್ಲಿ ಮತಯಂತ್ರ ಕೈಕೊಟ್ಟಿದ್ದರಿಂದ 40 ನಿಮಿಷ ತಡವಾಗಿ ಮತದಾನ ಪ್ರಾರಂಭವಾಯಿತು. ಮತ ಚಲಾಯಿಸಲು ಬೆಳಿಗ್ಗೆ 7 ಗಂಟೆಗೆ ಬಂದಿದ್ದ ಕಾಂಗ್ರೆಸ್‌ ಅಭ್ಯರ್ಥಿ ಮೋಟಮ್ಮ ಅವರು 40 ನಿಮಿಷ ಕಾದು ನಂತರ ಹಕ್ಕು ಚಲಾಯಿಸಿದರು.

7 ಗಂಟೆಗೆ ಮತದಾನ ಆರಂಭಿಸಿದಾಗ ಯಂತ್ರವು ಕಾರ್ಯನಿರ್ವಹಿಸದೆ ಸ್ಥಗಿತಗೊಂಡಿತು. ತಕ್ಷಣವೇ ಅಧಿಕಾರಿಗಳಿಗೆ ಮಾಹಿತಿ ನೀಡಿ ಬದಲಿ ಯಂತ್ರ ತರಿಸಿಕೊಂಡು ಮತದಾನಕ್ಕೆ ಅವಕಾಶ ಮಾಡಿಕೊಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT