ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಶ್ಮೀರ ಕುರಿತು ಸೌದಿ ಚರ್ಚೆ

ಕಾಶ್ಮೀರ ಕುರಿತು ಸೌದಿ ಅರೇಬಿಯಾದಲ್ಲಿ ಚರ್ಚೆ
Last Updated 29 ಡಿಸೆಂಬರ್ 2019, 22:37 IST
ಅಕ್ಷರ ಗಾತ್ರ

ಇಸ್ಲಾಮಾಬಾದ್‌: ಕಾಶ್ಮೀರದಲ್ಲಿನ ಸ್ಥಿತಿಗತಿ ಕುರಿತು ಇಸ್ಲಾಮಿಕ್ ಸಹಕಾರ ಸಂಘಟನೆಯ ವಿದೇಶಾಂಗ ಸಚಿವರ ಸಭೆಯನ್ನು ನಡೆಸಲು ಸೌದಿ ಅರೇಬಿಯಾ ಮುಂದಾಗಿದೆ.

ಮಲೇಷ್ಯಾದಲ್ಲಿ ನಡೆದಿದ್ದ ಮುಸ್ಲಿಂ ದೇಶಗಳ ಶೃಂಗಸಭೆಯಲ್ಲಿ ಪಾಕಿಸ್ತಾನ ಭಾಗವಹಿಸಿರಲಿಲ್ಲ. ಇದೀಗ ಪಾಕ್ ಅನ್ನು ಸಂತೋಷಪಡಿಸಲು ಸೌದಿ ಈ ಸಭೆ ಆಯೋಜಿಸಿದೆ ಎನ್ನಲಾಗುತ್ತಿದೆ.

ಸೌದಿ ವಿದೇಶಾಂಗ ಸಚಿವ ಫೈಸಲ್ ಬಿನ್‌ ಫರ್ಹಾನ್‌ ಅವರು ಈ ವಿಷಯವನ್ನು ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮೊಹಮ್ಮದ್‌ ಖುರೇಷಿ ಅವರಿಗೆ ಗುರುವಾರ ತಿಳಿಸಿರುವುದಾಗಿ ಡಾನ್‌ ವರದಿ ಮಾಡಿದೆ. ಫರ್ಹಾನ್‌ ಅವರು ಪಾಕಿಸ್ತಾನಕ್ಕೆ ಒಂದು ದಿನದ ಭೇಟಿ ನೀಡಿದ್ದರು.

ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷಾಧಿಕಾರವನ್ನು ಆ.5 ರಂದು ರದ್ದುಪಡಿಸಿದ ನಂತರ ಕಾಶ್ಮೀರದಲ್ಲಿನ ಸ್ಥಿತಿಗತಿಯ ಬಗ್ಗೆ ಖುರೇಷಿ ಅವರು ಫೈಸಲ್‌ ಅವರಿಗೆ ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT