ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಡೆನ್‌ ಹತ್ಯೆ: ಸಿಐಎಗೆ ಐಎಸ್‌ಐ ನೆರವು– ಇಮ್ರಾನ್‌

ಬಹಿರಂಗಪಡಿಸಿದ ಇಮ್ರಾನ್‌ ಖಾನ್‌
Last Updated 23 ಜುಲೈ 2019, 19:40 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಅಲ್‌ಕೈದಾ ಉಗ್ರ ಸಂಘಟನೆಯ ಮುಖಂಡ ಒಸಾಮಾ ಬಿನ್‌ ಲಾಡೆನ್‌ ಪಾಕಿಸ್ತಾನದಲ್ಲಿ ಅವಿತಿದ್ದ ಸ್ಥಳದ ಬಗ್ಗೆ ಸಿಐಎಗೆ ಐಎಸ್‌ಐ ಮಾಹಿತಿ ನೀಡಿತ್ತು. ಇದು ಲಾಡೆನ್‌ ಹತ್ಯೆಗೆ ನೆರವಾಯಿತು ಎಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ ಹೇಳಿದ್ದಾರೆ.

ಅಮೆರಿಕ ಪ್ರವಾಸದಲ್ಲಿರುವ ಅವರು,‘ಫಾಕ್ಸ್‌ ನ್ಯೂಸ್‌’ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಈ ವಿಷಯ ಬಹಿರಂಗಪಡಿಸಿದ್ದಾರೆ.‘ದೇಶದಲ್ಲಿ ಲಾಡೆನ್‌ ಅವಿತುಕೊಂಡಿರುವ ಕುರಿತಂತೆ ಮಾಹಿತಿ ಇಲ್ಲ’ ಎಂದೇ ಪಾಕಿಸ್ತಾನ ಹೇಳುತ್ತಾ ಬಂದಿತ್ತು. ಆದರೆ, 2011ರಲ್ಲಿ ಅಮೆರಿಕದ ನೌಕಾಪಡೆ ಯೋಧರು ಲಾಡೆನ್‌ನನ್ನು ಕೊಂದಾಗ, ಪಾಕಿಸ್ತಾನದ ಮುಖವಾಡ ಕಳಚಿಬಿದ್ದಿತ್ತು.

‘ಲಾಡೆನ್‌ ಅಡಗಿದ್ದ ಸ್ಥಳದ ಬಗ್ಗೆ ಸಿಐಎಗೆ ಮಾಹಿತಿ ನೀಡಿದ ಆರೋಪದ ಮೇಲೆ ಜೈಲುವಾಸ ಅನುಭವಿಸುತ್ತಿರುವ‍‍ಪಾಕಿಸ್ತಾನದ ಸರ್ಜನ್‌ ಶಕೀಲ್‌ ಅಫ್ರಿದಿ ಅವರನ್ನು ಬಿಡುಗಡೆ ಮಾಡುವಿರಾ’ ಎಂದು ‘ಫಾಕ್ಸ್‌ ನ್ಯೂಸ್‌’ ಪ್ರಶ್ನಿಸಿದಾಗ, ‘ದೇಶದ ಜನರ ದೃಷ್ಟಿಯಲ್ಲಿ ಡಾ.ಅಫ್ರಿದಿ ಸಿಐಎ ಗೂಢಚಾರ. ಹೀಗಾಗಿ ಅವರನ್ನು ಬಿಡುಗಡೆ ಮಾಡುವುದು ಪ್ರಚೋದನಾಕಾರಿ ವಿಷಯವಾಗುತ್ತದೆ’ ಎಂದು ಉತ್ತರಿಸಿದ್ದಾರೆ.

ಪಾಕ್‌ ಭೇಟಿಗೆ ಟ್ರಂಪ್‌ ಸಮ್ಮತಿ: ‘ಪಾಕಿಸ್ತಾನಕ್ಕೆ ಭೇಟಿ ನೀಡುವಂತೆ ಇಮ್ರಾನ್‌ ಖಾನ್‌ ನೀಡಿದ ಆಹ್ವಾನವನ್ನು ಡೊನಾಲ್ಡ್‌ ಟ್ರಂಪ್‌ ಸ್ವೀಕರಿಸಿದ್ದಾರೆ’ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವ ಎಫ್‌.ಎಂ.ಖುರೇಷಿ ತಿಳಿಸಿದ್ದಾರೆ.

‘ಶಾಂತಿಯುತ ನೆರೆ ರಾಷ್ಟ್ರವೇ ಆದ್ಯತೆ’

‘ಉಭಯ ದೇಶಗಳ ನಡುವಿನ ಮಾತುಕತೆಯಿಂದ ಶಾಂತಿ ನೆಲೆಸುವಂತೆ ಮಾಡಬಹುದು. ಅದರಲ್ಲೂ ಶಾಂತಿಯುತ ನೆರೆರಾಷ್ಟ್ರವನ್ನು ಹೊಂದುವುದೇ ನಮ್ಮ ಆದ್ಯತೆ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ವೇಳೆ ಇಮ್ರಾನ್‌ ಖಾನ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT