ಶುಕ್ರವಾರ, ಜುಲೈ 30, 2021
25 °C

ಫ್ಲಾಯ್ಡ್‌ ಸಾವು ಖಂಡಿಸಿ ಪ್ರತಿಭಟನೆ: ಬ್ರಿಟನ್‌ನಲ್ಲಿ 100ಕ್ಕೂ ಹೆಚ್ಚು ಜನರ ಬಂಧನ

ಏಜೆನ್ಸೀಸ್‌ Updated:

ಅಕ್ಷರ ಗಾತ್ರ : | |

ಲಂಡನ್‌: ಪೊಲೀಸ್‌ ಕ್ರೌರ್ಯದಿಂದ ಅಮೆರಿಕದಲ್ಲಿ ಮೃತಪಟ್ಟ ಜಾರ್ಜ್‌ ಫ್ಲಾಯ್ಡ್‌ ಸಾವು ಖಂಡಿಸಿ ಬ್ರಿಟನ್‌ನಲ್ಲಿ ನಡೆದ ಪ್ರತಿಭಟನೆ ವೇಳೆ 100ಕ್ಕೂ ಹೆಚ್ಚು ಜನರನ್ನು ಪೊಲೀಸರು ಬಂಧಿಸಿದ್ದಾರೆ.

ಲಂಡನ್‌ನಲ್ಲಿ ಪೊಲೀಸರು ಪ್ರತಿಭಟನೆಗೆ ಅವಕಾಶ ನೀಡದಿದ್ದರೂ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಜನರು ಪ್ರತಿಭಟನೆಗೆ ಮುಂದಾದರು. ಈ ವೇಳೆ ಗುಂಪು ಚದುರಿಸಲು ಮುಂದಾದ ಪೊಲೀಸರ ಮೇಲೆ ಪ್ರತಿಭಟನಾಕಾರರು ಹಲ್ಲೆ ನಡೆಸಿದ್ದಾರೆ ಎಂದು ಸ್ಕಾಟ್‌ಲ್ಯಾಂಡ್ ಯಾರ್ಡ್ ಪೊಲೀಸರು ತಿಳಿಸಿದ್ದಾರೆ.

ಪ್ರತಿಭಟನೆ ಮಾಡುತ್ತಿದ್ದ ಕೆಲವರು ಮಾರಕಾಸ್ತ್ರಗಳು, ಡ್ರಗ್ಸ್‌ ಸಹ ಹೊಂದಿದ್ದರು ಎಂದು ಲಂಡನ್‌ ಪೊಲೀಸರು ಮಾಹಿತಿ ನೀಡಿದ್ದಾರೆ.

ಪ್ರತಿಭಟನೆ ನಡೆಸಿದರೆ ಕೊರೊನಾ ಸೋಂಕು ಹರಡುವ ಸಾಧ್ಯತೆಗಳಿರುವುದರಿಂದ ನಾಗರಿಕರಲ್ಲಿ ಪ್ರತಿಭಟನೆ ನಡೆಸದಿರುವಂತೆ ಹಾಗೂ ಗುಂಪು ಸೇರದಿರುವಂತೆ ಬ್ರಿಟನ್‌ನ ಗೃಹ ಸಚಿವೆ ಪ್ರೀತಿ ಪಟೇಲ್‌ ಮನವಿ ಮಾಡಿದ್ದರು.

‘ನಾವು ಆರೋಗ್ಯ ತುರ್ತ ಪರಿಸ್ಥಿತಿಯಲ್ಲಿ ಇದ್ದೇವೆ, ಇದು ಪ್ರತಿಭಟನೆ ಮಾಡುವ ಸಂದರ್ಭವಲ್ಲ, ದಯಮಾಡಿ ನಾಗರಿಕರು ಪೊಲೀಸರ ಮನವಿಗೆ ಸ್ಪಂದಿಸಬೇಕು’ ಎಂದು  ಪ್ರೀತಿ ಪಟೇಲ್ ಮನವಿ ಮಾಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು