ಶನಿವಾರ, ಡಿಸೆಂಬರ್ 14, 2019
22 °C

ಚಿಕಿತ್ಸೆಗೆ ವಿದೇಶಕ್ಕೆ ತೆರಳಲು ಷರೀಫ್‌ಗೆ ಅನುಮತಿ

ಪಿಟಿಐ Updated:

ಅಕ್ಷರ ಗಾತ್ರ : | |

ಲಾಹೋರ್: ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರಿಗೆ ಚಿಕಿತ್ಸೆಗಾಗಿ ವಿದೇಶಕ್ಕೆ ತೆರಳಲು ಅನುಮತಿ ನೀಡುವಂತೆ ಲಾಹೋರ್ ಹೈಕೋರ್ಟ್ ಶನಿವಾರ ಸರ್ಕಾರಕ್ಕೆ ಆದೇಶ ನೀಡಿದೆ.

‘ನಾಲ್ಕು ವಾರದ ಅವಧಿಗೆ ಅವರು ವಿದೇಶದಲ್ಲಿ ಚಿಕಿತ್ಸೆ ಪಡೆಯಬಹುದು. ವೈದ್ಯರು ಶಿಫಾರಸು ಮಾಡಿದಲ್ಲಿ ಈ ಅವಧಿ ವಿಸ್ತರಿಸಬಹುದು. ಯಾವುದೇ ಷರತ್ತುಗಳಿಲ್ಲದೆ, ಸರ್ಕಾರ ಅವರ ಹೆಸರನ್ನು ವಿದೇಶ ಪ್ರವಾಸ ನಿರ್ಬಂಧ ಪಟ್ಟಿಯಿಂದ ತೆಗೆಯಬೇಕು’ ಎಂದು ಆದೇಶದಲ್ಲಿ ಉಲ್ಲೇಖಿಸಿರುವುದಾಗಿ ಡಾನ್ ಪತ್ರಿಕೆ ವರದಿ ಮಾಡಿದೆ.

ವಿದೇಶ ಪ್ರವಾಸ ನಿರ್ಬಂಧ ಪಟ್ಟಿಯಲ್ಲಿರುವ ತಮ್ಮ ಹೆಸರನ್ನು ತೆಗೆದುಹಾಕಲು ಸರ್ಕಾರಕ್ಕೆ ಆದೇಶ ನೀಡಬೇಕೆಂದು ಕೋರಿ ಷರೀಫ್ ಅವರು ಗುರುವಾರ ಹೈಕೋರ್ಟ್ ಮೊರೆ ಹೋಗಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು