ಸೋಮವಾರ, ಆಗಸ್ಟ್ 19, 2019
28 °C

ಭಾರತದ ಜೆಟ್‌ ನಾಶಪಡಿಸಿದ ಇಬ್ಬರು ಪೈಲಟ್‌ಗಳಿಗೆ ಪ್ರಶಸ್ತಿ: ಪಾಕ್‌

Published:
Updated:

ಇಸ್ಲಾಮಾಬಾದ್‌ : ಭಾರತದೊಂದಿಗಿನ ವೈಮಾನಿಕ ಸಂಘರ್ಷದಲ್ಲಿ ಶೌರ್ಯ ಮೆರೆದ ವಾಯುಪಡೆಯ ಇಬ್ಬರು ಪೈಲಟ್‌ಗಳಿಗೆ ಸೇನೆಯ ಅತ್ಯುನ್ನತ ಗೌರವ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪಾಕಿಸ್ತಾನದ ಅಧ್ಯಕ್ಷ ಆರೀಫ್‌ ಅಲ್ವಿ ಘೋಷಿಸಿದ್ದಾರೆ.

ಬಾಲಾಕೋಟ್‌ನಲ್ಲಿರುವ ಉಗ್ರರ ಅಡಗುತಾಣಗಳ ಮೇಲೆ ಬಾಂಬ್‌ ದಾಳಿ ನಡೆಸಿದ ಸಂದರ್ಭದಲ್ಲಿ ಭಾರತದ ವಾಯುಪಡೆಯ ಜೆಟ್‌ವೊಂದನ್ನು ಹೊಡೆದುರುಳಿಸಿದ ಕಾರಣಕ್ಕೆ ಈ ಪ್ರಶಸ್ತಿ ನೀಡಲಾಗುತ್ತದೆ.

ಫೆ. 27ರಂದು ವಿಂಗ್‌ ಕಮಾಂಡರ್‌ ಅಭಿನಂದನ್ ವರ್ಧಮಾನ್‌ ಅವರಿದ್ದ ಜೆಟ್‌ ಹೊಡೆದುರುಳಿಸಿದ್ದ ಪಾಕಿಸ್ತಾನ ವಾಯುಪಡೆಯ ವಿಂಗ್‌ ಕಮಾಂಡರ್‌ ಮುಹಮ್ಮದ್‌ ನೌಮಾನ್‌ ಅಲಿಗೆ ಸಿತಾರ್‌–ಎ–ಜುರಾತ್‌ ಪ್ರಶಸ್ತಿ, ಸ್ಕ್ವ್ಯಾಡ್ರನ್‌ ಲೀಡರ್‌ ಹಸನ್‌ ಮಹಮೂದ್‌ ಸಿದ್ದಿಕಿಗೆ ತಮ್‌ಘಾ–ಎ–ಶುಜಾತ್‌ ಪ್ರಶಸ್ತಿ ನೀಡಲಾಗುತ್ತದೆ.

Post Comments (+)