7

‘‌ಪಾಕ್ ಟೊಳ್ಳುಮಾತು ವಾಸ್ತವ ಬದಲಿಸದು’

Published:
Updated:

ವಿಶ್ವಸಂಸ್ಥೆ (ಪಿಟಿಐ): ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಎನ್ನುವ ವಾಸ್ತವ, ಪಾಕಿಸ್ತಾನದ ಯಾವುದೇ ಟೊಳ್ಳುಮಾತುಗಳಿಂದಾಗಿ ಬದಲಾಗುವುದಿಲ್ಲ ಎಂದು ಭಾರತ ಹೇಳಿದೆ. 

‘ನರಹತ್ಯೆ, ಯುದ್ಧಾಪರಾಧ, ಜನಾಂಗೀಯ ಹತ್ಯೆ’ ವಿಷಯ ಕುರಿತು ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ನಡೆದ ಚರ್ಚೆ ವೇಳೆ, ವಿಶ್ವಸಂಸ್ಥೆಗೆ ಪಾಕಿಸ್ತಾನದ ಪ್ರತಿನಿಧಿ ಆಗಿರುವ ಮಲೀಹಾ ಲೋಧಿ ಅವರು ಕಾಶ್ಮೀರದ ಪ್ರಸ್ತಾಪ ಮಾಡಿದ್ದರು. 

ಕಾಶ್ಮೀರದ ಜನರು ಹತ್ಯೆ ಹಾಗೂ ಸಾಮೂಹಿಕ ಕುರುಡುತನದಂತಹ ಗಂಭೀರ ಅಪರಾಧ ಕೃತ್ಯಗಳ ಸಂತ್ರಸ್ತರಾಗುತ್ತಿದ್ದಾರೆ ಎಂದು ಹೇಳಿದ್ದರು.

ಉತ್ತರಿಸುವ ಹಕ್ಕು ಚಲಾಯಿಸಿ ಈ ಕುರಿತು ಪ್ರತಿಕ್ರಿಯೆ ನೀಡಿದ ಭಾರತ, ಇದನ್ನು ಸಾರಾಸಗಟಾಗಿ ತಿರಸ್ಕರಿಸಿದೆ. 

‘ನಮ್ಮೆಲ್ಲರಿಗೂ ಪ್ರಮುಖವಾಗಿರುವ ಗಂಭೀರ ವಿಷಯದ ಕುರಿತು ಚರ್ಚೆ ನಡೆಯುತ್ತಿರುವ ವೇಳೆ, ಸದಸ್ಯ ರಾಷ್ಟ್ರವೊಂದು ಪುನಃ ಈ ವೇದಿಕೆಯನ್ನು ದುರುಪಯೋಗಪಡಿಸಿಕೊಂಡು, ಜಮ್ಮು–ಕಾಶ್ಮೀರ ಕುರಿತು ಆಧಾರವಿಲ್ಲದ ಉಲ್ಲೇಖ ಮಾಡು
ತ್ತಿದೆ. ಪಾಕಿಸ್ತಾನದ ಇಂತಹ ಸಿನಿಕ ತನದ ಯತ್ನಗಳು ಹಿಂದೆಯೂ ವಿಫಲವಾಗಿವೆ’ ಎಂದು ವಿಶ್ವಸಂಸ್ಥೆಗೆ ಭಾರತದ ಕಾಯಂ ಪ್ರತಿನಿಧಿ ಆಗಿರುವ ಸಂದೀಪ್ ಕುಮಾರ್ ಬಯ್ಯಪು ಹೇಳಿದ್ದಾರೆ. 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !