ಪ್ರಧಾನಿ ಅಭ್ಯರ್ಥಿಯಾಗಿ ಇಮ್ರಾನ್‌ಖಾನ್‌: ಇಂದು ಪಿಟಿಐ ಘೋಷಣೆ

7

ಪ್ರಧಾನಿ ಅಭ್ಯರ್ಥಿಯಾಗಿ ಇಮ್ರಾನ್‌ಖಾನ್‌: ಇಂದು ಪಿಟಿಐ ಘೋಷಣೆ

Published:
Updated:

ಇಸ್ಲಾಮಾಬಾದ್‌ (ಪಿಟಿಐ): ತೆಹ್ರೀಕ್‌–ಎ–ಇನ್ಸಾಫ್‌ ಮುಖಂಡ ಇಮ್ರಾನ್‌ಖಾನ್‌ ಅವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಪಕ್ಷವು ಆ. 6ರಂದು ಅಧಿಕೃತವಾಗಿ ಘೋಷಣೆ ಮಾಡಲಿದೆ.

ಪ್ರಮಾಣ ವಚನ ಸ್ವೀಕರಿಸಿದ ನಂತರ ಮೊದಲ ಹಂತದಲ್ಲಿ 15–20 ಸಚಿವರನ್ನು ಒಳಗೊಂಡ ಸಂಪುಟವನ್ನು ಇಮ್ರಾನ್‌ಖಾನ್‌ ರಚಿಸಲಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಪ್ರಮಾಣವಚನ ಸಮಾರಂಭ ನಡೆಯುವ ದಿನಾಂಕ ಇನ್ನೂ ಅಧಿಕೃತವಾಗಿ ಘೋಷಣೆಯಾಗಿಲ್ಲ. ಆದರೆ, ದೇಶದ ಸ್ವಾತಂತ್ರ್ಯ ದಿನವಾದ ಆ. 14ರಂದೇ ಅವರು ಪ್ರಮಾಣ ಸ್ವೀಕರಿಸುವರು ಎಂದೂ ವರದಿ ಮಾಡಿವೆ.

‘ಇಸ್ಲಾಮಾಬಾದ್‌ನ ಖಾಸಗಿ ಹೋಟೆಲ್‌ವೊಂದರಲ್ಲಿ ಸೋಮವಾರ (ಆ. 6) ಪಕ್ಷದ ಸಂಸದೀಯ ಸಭೆ ನಡೆಯುವುದು. ಅದೇ ಸಭೆಯಲ್ಲಿ ಇಮ್ರಾನ್‌ಖಾನ್‌ ಅವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಘೋಷಿಸಲಾಗುವುದು’ ಎಂದು ಪಕ್ಷದ ವಕ್ತಾರ ಫವಾದ್‌ ಚೌಧರಿ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !