ಮಂಗಳವಾರ, ಆಗಸ್ಟ್ 20, 2019
22 °C

ಪಾಕ್‌ಗೆ ₹800 ಕೋಟಿ ನಷ್ಟ

Published:
Updated:

ಕರಾಚಿ: ಬಾಲಾಕೋಟ್‌ ವಾಯುದಾಳಿಯ ನಂತರ ಪಾಕಿಸ್ತಾನ ತನ್ನ ವಾಯುಮಾರ್ಗವನ್ನು ಬಂದ್ ಮಾಡಿದ್ದರಿಂದ ₹800 ಕೋಟಿ ನಷ್ಟ ಅನುಭವಿಸಿದೆ ಎಂದು ಇಲ್ಲಿನ ಮಾಧ್ಯಮಗಳು ವರದಿ ಮಾಡಿವೆ.

ಭಾರತೀಯ ವಾಯುಪಡೆ (ಐಎಎಫ್‌) ಬಾಲಾಕೋಟ್‌ನಲ್ಲಿನ ಜೈಷ್‌ ಎ ಮೊಹಮ್ಮದ್‌ನ ಉಗ್ರರ ತರಬೇತಿ ಶಿಬಿರದ ಮೇಲೆ ದಾಳಿ ನಡೆಸಿದ ನಂತರ ಫೆಬ್ರುವರಿ 26ರಂದು ಪಾಕಿಸ್ತಾನ ತನ್ನ ವಾಯುನೆಲೆಯನ್ನು ಬಂದ್ ಮಾಡಿತ್ತು.

ನಾಗರಿಕ ವಿಮಾನಗಳ ಸಂಚಾರಕ್ಕೆ ತನ್ನ ವಾಯುನೆಲೆಯನ್ನು ಪಾಕಿಸ್ತಾನ ಮುಕ್ತಗೊಳಿಸಿದ ಬಳಿಕ ಭಾರತ ಮತ್ತು ಪಾಕಿಸ್ತಾನ ನಡುವಿನ ಸಾಮಾನ್ಯ ವೈಮಾನಿಕ ಸಂಚಾರ ಮಂಗಳವಾರದಿಂದ ಸಾಮಾನ್ಯ ಸ್ಥಿತಿಗೆ ಬಂದಿದೆ.

Post Comments (+)