ಪಾಕಿಸ್ತಾನದ ಮೊದಲ ಸಿಖ್‌ ಪೊಲೀಸ್‌ ಕೆಲಸದಿಂದ ವಜಾ

7

ಪಾಕಿಸ್ತಾನದ ಮೊದಲ ಸಿಖ್‌ ಪೊಲೀಸ್‌ ಕೆಲಸದಿಂದ ವಜಾ

Published:
Updated:

ಇಸ್ಲಾಮಾಬಾದ್‌: ಪಾಕಿಸ್ತಾನದ ಮೊದಲ ಸಿಖ್‌ ಪೊಲೀಸ್‌ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಗುಲಾಬ್‌ ಸಿಂಗ್‌(35) ಅವರು ದೀರ್ಘ ಕಾಲ ಗೈರುಹಾಜರಾದ ಕಾರಣ ಕೆಲಸದಿಂದ ತೆಗೆದು ಹಾಕಲಾಗಿದೆ ಎಂದು ಸಂಚಾರ ಪೊಲೀಸ್‌ ವಕ್ತಾರ ಅಲಿ ನವಾಜ್‌ ಹೇಳಿಕೆ ನೀಡಿದ್ದಾರೆ.

‘ಕಳೆದ ಮೂರು ತಿಂಗಳಿಗೂ ಹೆಚ್ಚು ಕಾಲದಿಂದ ಕರ್ತವ್ಯಕ್ಕೆ ಹಾಜರಾಗದ ಕುರಿತು ವಿಚಾರಣೆ ನಡೆಸಿದ ಸಂಚಾರ ವಿಭಾಗದ ಸೂಪರಿಂಟೆಂಡೆಂಟ್‌ ಆಸಿಫ್‌ ಸಾದಿಕ್‌ ಅವರು, ಗುಲಾಬ್‌ ಸಿಂಗ್‌ನನ್ನು ಸೇವೆಯಿಂದ ವಜಾ ಮಾಡಿದ್ದಾರೆ. ತನಿಖಾ ಸಮಿತಿ ಎದುರು ಸಿಂಗ್‌ ಯಾವುದೇ ಸಮರ್ಥನೆ ನೀಡಿಲ್ಲ’ ಎಂದು ಮಾಹಿತಿ ನೀಡಿದ್ದಾರೆ.

ಕೆಲಸದಿಂದ ವಜಾ ಮಾಡಿರುವುದರ ವಿರುದ್ಧ ಡಿಐಜಿ ಕಚೇರಿಯಲ್ಲಿ ಮೇಲ್ಮನವಿ ಸಲ್ಲಿಸುವುದಕ್ಕೆ ಸಿಂಗ್‌ಗೆ ಅವಕಾಶವಿದೆ ಎಂದೂ ತಿಳಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಸಿಂಗ್‌, ‘ನಿರ್ವಾಸಿತರ ಟ್ರಸ್ಟ್ ಆಸ್ತಿ ಮಂಡಳಿ(ಇಟಿಪಿಬಿ)ಯ ಮನವಿಯ ಮೇರೆಗೆ ಎಸ್‌ಪಿ ಸಾದಿಕ್‌ ಅವರು ತಮ್ಮ ವಿರುದ್ಧ ಕ್ರಮ ಕೈಗೊಂಡಿದ್ದಾರೆ’ ಎಂದು ದೂರಿದ್ದಾರೆ.

‘ನನಗೆ ಅಪಘಾತವಾಗಿತ್ತು. ಇದಕ್ಕೆ ಸಂಬಂಧಿಸಿದ ವೈದ್ಯಕೀಯ ದಾಖಲಾತಿಗಳನ್ನು ರಜೆಯ ಅರ್ಜಿಯೊಂದಿಗೆ ಇಲಾಖೆಗೆ ಸಲ್ಲಿಸಿದ್ದೇನೆ. ರಜೆ ವಿಚಾರವಾಗಿ ನನ್ನ ವಿರುದ್ಧ ಕ್ರಮ ಕೈಗೊಳ್ಳುವುದಕ್ಕೆ ಸಂಬಂಧಿಸಿದಂತೆ ಇಲಾಖೆಯಿಂದ ಇದುವರೆಗೆ ಯಾವುದೇ ನಿರ್ದೇಶನ ಬಂದಿಲ್ಲ’ ಎಂದೂ ಹೇಳಿಕೊಂಡಿದ್ದಾರೆ.

ಡಿಐಜಿ ಅವರು ತಮ್ಮ ಮನವಿಯನ್ನು ಆಲಿಸಲಿದ್ದು, ಪುನಃ ಕೆಲಸಕ್ಕೆ ಹಾಜರಾಗಲಿದ್ದೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸಿಖ್‌ ಗುರುದ್ವಾರ ಪ್ರತಿಬಂಧಕ್‌ ಸಮಿತಿ(ಪಿಎಸ್‌ಜಿಪಿಸಿ)ಯ ಭಾಗವಾಗಿರುವ ಇಟಿಪಿಬಿಯಿಂದ ಲಾಹೋರ್‌ನ ಹಳ್ಳಿಯಲ್ಲಿರುವ ತಮ್ಮ ಕುಟುಂಬವನ್ನು ಬಲವಂತದಿಂದ ಹೊರಹಾಕಲಾಗಿದೆ ಎಂದು ಒಂದು ತಿಂಗಳ ಹಿಂದೆ ಸಿಂಗ್‌ ಆರೋಪಿಸಿದ್ದರು.

ಅಕ್ರಮವಾಗಿ ತಮ್ಮ ಕುಟುಂಬವನ್ನು ಹೊರಹಾಕಿರುವ ಕುರಿತು ಇಟಿಪಿಬಿ ವಿರುದ್ಧ ದೂರು ದಾಖಲಿಸಿದ್ದಾರೆ. ‘ಪ್ರಕರಣ ಸುಪ್ರೀಂಕೋರ್ಟ್‌ ತಲುಪಿದರೆ ಇಟಿಪಿಬಿ ಚಿಂತೆ ಮಾಡಬೇಕಾಗುತ್ತದೆ’ ಎಂದಿದ್ದಾರೆ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 3

  Angry

Comments:

0 comments

Write the first review for this !