ಶುಕ್ರವಾರ, ಏಪ್ರಿಲ್ 3, 2020
19 °C

ಪಾಕ್‌ನಲ್ಲಿ ಅಹ್ಮದೀಯರ ಪ್ರಾರ್ಥನಾ ಸ್ಥಳ ಧ್ವಂಸ

ಪಿಟಿಐ Updated:

ಅಕ್ಷರ ಗಾತ್ರ : | |

ಲಾಹೋರ್‌: ಪಂಜಾಬ್‌ ಪ್ರಾಂತ್ಯದಲ್ಲಿ ಅಲ್ಪಸಂಖ್ಯಾತ ಅಹ್ಮದೀಯರಿಗೆ ಸೇರಿದ್ದ 70 ವರ್ಷ ಹಳೆಯ ಪ್ರಾರ್ಥನಾಮಂದಿರವನ್ನು ಕೆಡವಲಾಗಿದೆ ಎಂದು ಅಹ್ಮದೀಯ ಸಮುದಾಯದ ಸದಸ್ಯರೊಬ್ಬರು ಸೋಮವಾರ ತಿಳಿಸಿದ್ದಾರೆ. 

1974ರಲ್ಲಿ ಪಾಕ್‌ ಸರ್ಕಾರವು ಅಹ್ಮದಿ ಸಮುದಾಯದವರು ಮುಸ್ಲಿಮರಲ್ಲ ಎಂದು ಘೋಷಿಸಿತ್ತು. ದಶಕದ ಬಳಿಕ ಅವರು ತಮ್ಮನ್ನು ಮುಸ್ಲಿಮರೆಂದು ಗುರುತಿಸಿಕೊಳ್ಳುವುದನ್ನು ನಿಷೇಧಿಸಲಾಗಿತ್ತು.

ಅವರು ಪ್ರವಚನ ಮಾಡುವುದನ್ನು ಮತ್ತು ಸೌದಿ ಅರೇಬಿಯಾಕ್ಕೆ ಯಾತ್ರೆಗೆ ತೆರಳುವುದನ್ನು ಕೂಡ ನಿಷೇಧಿಸಲಾಗಿತ್ತು.

‘ಬಹವಲ್ಪುರ ಜಿಲ್ಲೆಯ ಹಸಿಲ್‌ಪುರ ಹಳ್ಳಿಯಲ್ಲಿದ್ದ ಪ್ರಾರ್ಥನಾ ಸ್ಥಳವನ್ನು ನೆಲಸಮ ಮಾಡಲಾಗಿದೆ. ಯಾವುದೇ ನೋಟಿಸ್‌ ನೀಡದೇ ಹಸಿಲ್‌ಪುರದ ಉಪವಿಭಾಗಾಧಿಕಾರಿ ಪ್ರಾರ್ಥನಾ ಮಂದಿರದ ಭಾಗಶಃ ಕಟ್ಟಡವನ್ನು ಧ್ವಂಸ ಮಾಡಿದ್ದಾರೆ’ ಎಂದು ಸಮುದಾಯದ ವಕ್ತಾರ ಸಲೀಮುದ್ದೀನ್‌ ಟ್ವೀಟ್‌ ಮಾಡಿದ್ದಾರೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು