ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್-19ಗೆ ಮಹಿಳೆಯರ ‘ಅಸಭ್ಯತೆ’ ಕಾರಣ ಎಂದ ಪಾಕಿಸ್ತಾನಿ ಮೌಲ್ವಿ

Last Updated 27 ಏಪ್ರಿಲ್ 2020, 5:35 IST
ಅಕ್ಷರ ಗಾತ್ರ

ಇಸ್ಲಾಮಾಬಾದ್: ಮಾನವನ ಮೇಲೆ ಕೊರೊನಾ ವೈರಸ್‌ ಸೋಂಕಿನ (ಕೋವಿಡ್–19) ದಾಳಿಗೆ ಮಹಿಳೆಯರ ಅಸಭ್ಯತೆಯೇ ಕಾರಣ ಎಂದು ಪಾಕಿಸ್ತಾನದ ಮೌಲ್ವಿ ಮೌಲಾನಾ ತಾರಿಖ್ ಜಮೀಲ್ ಹೇಳಿದ್ದಾರೆ. ಟಿವಿಯೊಂದರ ನೇರ ಪ್ರಸಾರ ಕಾರ್ಯಕ್ರಮದಲ್ಲಿ ಪ್ರಧಾನಿ ಇಮ್ರಾನ್ ಖಾನ್‌ ಸಮ್ಮುಖದಲ್ಲೇ ಅವರು ಈ ಮಾತುಗಳನ್ನಾಡಿದ್ದಾರೆ.

ನಿಧಿ ಸಂಗ್ರಹಕ್ಕೆ ಸಂಬಂಧಿಸಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಅವರು ಮಹಿಳೆಯರ ವಿರುದ್ಧ ಈ ಹೇಳಿಕೆ ನೀಡಿದ್ದಾರೆ ಎಂದು ವರದಿಯಾಗಿದೆ. ಆ ಸಂದರ್ಭ ಕಾರ್ಯಕ್ರಮದಲ್ಲೇ ಇದ್ದರೂ ಇಮ್ರಾನ್ ಖಾನ್ ಅವರು ಮೌಲ್ವಿ ಮಾತುಗಳಿಗೆ ಆಕ್ಷೇಪ ವ್ಯಕ್ತಪಡಿಸಿರಲಿಲ್ಲ.

ಮಾಧ್ಯಮಗಳು ಸುಳ್ಳು ಪ್ರಚಾರ ಮಾಡುತ್ತಿವೆ ಎಂದೂ ಜಮೀಲ್ ಆರೋಪಿಸಿದ್ದಾರೆ. ಬಳಿಕ ವಿರೋಧ ವ್ಯಕ್ತವಾಗುತ್ತಿದ್ದಂತೆ ಮಹಿಳೆಯರ ವಿರುದ್ಧದ ಹೇಳಿಕೆಗಾಗಿ ಕ್ಷಮೆ ಕೇಳಿದ್ದಾರೆ.

ಕೊರೊನಾಕ್ಕೆ ಮಹಿಳೆಯರನ್ನು ದೂಷಿಸಿ ಜಮೀಲ್ ನೀಡಿರುವ ಹೇಳಿಕೆಯನ್ನು ಪಾಕಿಸ್ತಾನದ ಮಾನವ ಹಕ್ಕು ಆಯೋಗ ಖಂಡಿಸಿದೆ. ಜಮೀಲ್ ಅವರು ಇತ್ತೀಚೆಗೆ ಮಹಿಳೆಯರ ವಿರುದ್ಧ ನೀಡಿರುವ ಹೇಳಿಕೆಯನ್ನು ಒಪ್ಪಲಾಗದು. ಇಂತಹ ಹೇಳಿಕೆಗಳು, ಅದೂ ಸಾರ್ವಜನಿಕವಾಗಿ ಟಿವಿಯಲ್ಲಿ ಪ್ರಸಾರವಾದಾಗ ಸಮಾಜದಲ್ಲಿ ಭದ್ರವಾಗಿ ನೆಲೆಯೂರಿರುವ ದುರ್ಬಳಕೆಯನ್ನು ಬಿಂಬಿಸಿದಂತೆ ಎಂದು ಆಯೋಗ ಟ್ವೀಟ್ ಮಾಡಿದೆ.

ಪಾಕಿಸ್ತಾನದ ಪತ್ರಿಕೆ ‘ಡಾನ್‌’ ಜಮೀಲ್ ಹೇಳಿಕೆಯನ್ನು ಖಂಡಿಸಿ ಸಂಪಾದಕೀಯವನ್ನೂ ಪ್ರಕಟಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT